`ಕುಂತಿ ಪಾಂಡು’ ಜಗದೀಶ ಶರ್ಮಾ ಅವರ ಪುರಾಣ ಧಾರ್ಮಿಕ ತತ್ವಶಾಸ್ತ್ರವಾಗಿದೆ. ಇದಕ್ಕೆ ಲೇಖಕರ ಬೆನ್ನುಡಿ ಬರಹ ಹೀಗಿದೆ; ಜೀವಂತಿಕೆ, ಕ್ರಿಯಾಶೀಲತೆ, ಮೇಧೆ, ಪ್ರಬುದ್ಧತೆ, ಗಾಂಭೀರ್ಯ, ವಿನಯ, ವಿದ್ಯೆ, ವಿವೇಕ, ತ್ಯಾಗಶೀಲತೆ, ಸಹಿಷ್ಣುತೆ, ಸಮರ್ಪಣೆ, ತಪಸ್ಸು, ಪಶ್ಚಾತ್ತಾಪ, ಸಹಾನುಭೂತಿ, ಸೇವೆ, ಸಾಮರ್ಥ್ಯ, ಕೌಶಲ, ದಾರ್ಢ್ಯ, ಕಷ್ಟ, ನಷ್ಟ, ಸೋಲು, ಗೆಲುವು, ಸವಾಲು, ಸಮೃದ್ಧಿ, ಸೌಂದರ್ಯ, ನೆನಪು, ಕನಸು, ಪ್ರೀತಿ, ವಾತ್ಸಲ್ಯ, ವಿಶ್ವಾಸ, ಓಟ, ನೆಲೆ. ಇವು ಮೌಲ್ಯಗಳ ಅಥವಾ ಬದುಕಿನಲ್ಲಿ ಇರುವ ಸಂಗತಿಗಳ ಯಾದಿಯಲ್ಲ. ಇಬ್ಬರ ಬದುಕಿನ ಆದ್ಯಂತಗಳು ಇವು. ಒಂದು ಬದುಕಿನಲ್ಲಿ ಹಲವು ಬದುಕುಗಳನ್ನು ಕಂಡಾಗಳಷ್ಟೆ ಇವೆಲ್ಲ ಒಂದೇ ಕಡೆಯಲ್ಲಿ ಕಾಣಸಿಗುವುದು. ಇವು ಕಾಣಿಸಿದ್ದು- ಕುಂತಿಯ ಬದುಕಿನಲ್ಲಿ, ಪಾಂಡುವಿನ ಬದುಕಿನಲ್ಲಿ, ಅವರಿಬ್ಬರ ಜೋಡಿ ಬದುಕಿನಲ್ಲಿ. ಇವೆಲ್ಲವುಗಳನ್ನು ಹೆಣೆದ ವ್ಯಾಸರ ಮೇಧೆಗೆ ತಲೆಬಾಗುತ್ತಲೇ ಈ ಕೃತಿ ರೂಪ ತಳೆದಿದೆ ಎಂಬುವುದನ್ನು ಈ ಕೃತಿಯಲ್ಲಿ ನೋಡಬಹುದು ಎಂದು ತಿಳಿಸಿದ್ದಾರೆ.
©2024 Book Brahma Private Limited.