'ವಿಷ್ಣುಸಹಸ್ರನಾಮ' ಈ ಕೃತಿಯು ವೇದಗಳ , ಉಪನಿಷತ್ತು ಹಾಗೂ ಭಗವದ್ಗೀತೆಯ ಸಾರಾಂಶವಾಗಿದೆ . ವಿಷ್ಣುಸಹಸ್ರನಾಮವನ್ನು ಪಠಿಸಿದರೆ ದೇಹಕ್ಕೆ ಆರೋಗ್ಯ , ಮನಸ್ಸಿಗೆ ನೆಮ್ಮದಿ ಮತ್ತು ಜೀವನ ಉಲ್ಲಾಸಕರವಾಗಿರುತ್ತದೆ ಎಂಬುದು ನಂಬಿಕೆ. ನಾಮದ ಪ್ರತಿ ನಾಮವು ಪರಮಾತ್ಮನ ಶಕ್ತಿ , ಸಂಭ್ರಮ ಮತ್ತು ಕಾರ್ಯವೈಖರಿಯನ್ನು ವಿವರಿಸುತ್ತದೆ . ಜೀವಾತ್ಮನು ಪರಮಾತ್ಮನ ಅಂಶವೆಂಬುದನ್ನು ನಿಸ್ಸಂದೇಹವಾಗಿ ತೋರಿಸುತ್ತದೆ .
ತಿ. ನಾ. ರಾಘವೇಂದ್ರ ಅವರು ವಿಷ್ಣುಸಹಸ್ರನಾಮದ ಪ್ರತಿಯೊಂದು ನಾಮವನ್ನು ಅರ್ಥೈಸಿ ಅದನ್ನು ವೇದ ಉಪನಿಷತ್ತುಗಳ ಮೂಲವನ್ನು ವಿವರಿಸಿದ್ದಾರೆ . ಈ ಕೃತಿಯು ಸಮಗ್ರ ವೇದ ಉಪನಿಷತ್ತುಗಳ ಜ್ಞಾನವನ್ನೇ ದಯಪಾಲಿಸುತ್ತದೆ . ಈ ಪುಸ್ತಕವು ಆಂಗ್ಲಭಾಷೆಯಲ್ಲಿಯು ಅಮೆಜಾನ್ ಹಾಗೂ ಕಿಂಡ್ಲ್ ನಲ್ಲಿ ದೊರೆಯುತ್ತದೆ
©2024 Book Brahma Private Limited.