ಶ್ರೀಕೃಷ್ಣಾವತಾರದ ಪೂರ್ವಾರ್ಧ ಹಾಗೂ ಉತ್ತರಾರ್ಧ ಅವಧಿಯಲ್ಲಿ ಜರುಗಿದ ವಿವರಗಳನ್ನು ಒಳಗೊಂಡ ಎರಡು ಪ್ರತ್ಯೇಕ ಕೃತಿಗಳು ಇಲ್ಲಿವೆ. ಕೃತಿಗಳ ಕರ್ತೃ ಪ್ರೊ. ಕೆ.ಎಸ್. ನಾರಾಯಣಾಚಾರ್ಯ. ಶ್ರೀ ಕೃಷ್ಣನು ಸರ್ವಾಂತರ್ಯಾಮಿ. ಆತನಿಗೆ ಹುಟ್ಟು ಇಲ್ಲ; ಸಾವೂ ಇಲ್ಲ. ವಿಶ್ವದ ಪ್ರತಿ ಸೂಕ್ಷ್ಮ ಚಟುವಟಿಕೆಯೂ ಆತನ ಮನವನ್ನು ಅವಲಂಬಿಸಿದೆ. ಆದರೂ, ದಶಾವತಾರಗಳ ಪೈಕಿ ಶ್ರೀಕೃಷ್ಣಾವತಾರವೂ ಒಂದು. ಇದರ ಪೂರ್ವಾರ್ಧ ಹಾಗೂ ಉತ್ತರಾರ್ಧ ಅವಧಿಯ ಚಟುವಟಿಕೆಗಳನ್ನು ವಿಶ್ಲೇಷಿಸುವ ಮೂಲಕ ಶ್ರೀಕೃಷ್ಣನ ಅನಂತ ರೂಪವನ್ನು ಕಾಣುವ ಹಾಗೂ ತೋರುವ ಪ್ರಯತ್ನ ಕೃತಿಯಲ್ಲಿ ಕಾಣಬಹುದು.
©2025 Book Brahma Private Limited.