‘ಪುರಾಣ ಪ್ರಸಿದ್ಧರು’ ಎಂ.ಎಸ್. ಆರ್. ಮಂಜುನಾಥ ಅವರ ಪೌರಾಣಿಕ ಕಥನವಾಗಿದೆ. ಭಾರತದಂತಹ ಪುರಾತನ ದೇಶದಲ್ಲಿ, ಪೌರಾಣಿಕ ವ್ಯಕ್ತಿಗಳು, ಅವರ ಗುಣ-ನಡವಳಿಕೆಗಳು, ಅವರು ಪಟ್ಟ ಕಷ್ಟ-ಕೋಟಲೆಗಳು, ಅವರ ಸುಖ-ದುಃಖಗಳು ಸಾಮಾನ್ಯ ಜನರ ಜೀವನದ ಭಾಗವೇ ಆಗಿದೆ. 'ಅಯ್ಯೋ ರಾಮ!' ಎನ್ನುವ ಉದ್ದಾರದಿಂದ ಹಿಡಿದು, ಅಂತೂ ಇಂತೂ ಕುಂತೀಮಕ್ಕಳಿಗೆ ರಾಜ್ಯವಿಲ್ಲ' ಎನ್ನುವ ಗಾದೆಯವರೆಗೆ ಇವರನ್ನು ನೆನಪಿಸಿಕೊಳ್ಳದ ದಿನವಿಲ್ಲ. ಸಾವಿರಾರು ವರ್ಷಗಳಿಂದ ರಾಮಾಯಣ, ಮಹಾಭಾರತ, ಭಾಗವತ ಹಾಗೂ ಅನೇಕ ಪುರಾಣಗಳ ಪಾತ್ರಧಾರಿಗಳು ಒಂದಲ್ಲ ಒಂದು ಗುಣಕ್ಕಾಗಿ ಜನರ ಮನದಲ್ಲಿ ಉಳಿದಿದ್ದು, ಅವರ ಬಗ್ಗೆ ಸಂಕ್ಷಿಪ್ತವಾಗಿ ನಿಖರ ಮಾಹಿತಿ ಅಥವಾ ವಿವರಣೆಗಳನ್ನು ಕೊಡುವುದು ಈ ಪುಸ್ತಕದ ಉದ್ದೇಶವಾಗಿದೆ.
©2025 Book Brahma Private Limited.