ಭಗವತೀ ಕಾತ್ಯಾಯಿನಿ-ಎಂಬುದು ಗಳಗನಾಥರು ಬರೆದ ಕೃತಿ. ಸಾಂಬ ದೀಕ್ಷಿತ ಕಾಶೀಕರ ಅವರ ‘ಯಾಜ್ಞವಲ್ಕ್ಯ ಚರಿತ್ರೆ’ ಹಾಗೂ ‘ಮೇತ್ರೇಯಿ’ ಕೃತಿಗಳನ್ನು ಆಧರಿಸಿ ಬರೆದಿದೆ. ಆದರೆ, ಕೆಲವು ವಿಭಾಗಗಳನ್ನು ಸ್ವತಃ ಲೇಖಕರೇ ಬರೆದಿದ್ದಾಗಿ ಪ್ರಸ್ತಾವನೆ ನೀಡಲಾಗಿದೆ. ಭಗವತಿ ಕಾತ್ಯಾಯಿನಿಯ ಮಾತೃಭಗನಿಯರಲ್ಲಿ ಅನುಕರಣೀಯ ಎಂದೂ ಲೇಖಕರು ಅಭಿಪ್ರಾಯಪಟ್ಟಿದ್ದಾರೆ.
ಪುರಾಣ-ಭಾಗವತದ ಯಾಜ್ಞವಲ್ಕ್ಯರಿಗೂ-ವೈಶಯಂಪಾಯರಿಗೂ ಘರ್ಷಣೆ, ಯಾಜ್ಞವಲ್ಕ್ಯ-ಕಾತ್ಯಾಯಿನಿ, ಮೈತ್ರೇಯಿ, ಜನಕರಾಜ ಪಾತ್ರಗಳ ವಿಶ್ಲೇಷಣೆಯು ಆಕರ್ಷಕವಾಗಿದೆ. ವಿಶೇಷವಾಗಿ ಕಾತ್ಯಾಯಿನಿ-ಮೈತ್ರೇಯಿ ನಡೆಸುವ ಸ್ತ್ರೀ ಸ್ವಾತಂತ್ಯ್ರ, ಅದರ ಸದ್ಬಳಕೆ, ಸ್ತ್ರೀಯರಿಗೆ ಬ್ರಹ್ಚರ್ಯ? ಇಂತಹ ವಿಷಯಗಳ ಮೇಲಿನ ಸಂಭಾಷಣೆಯು ಇಂದಿಗೂ ಮಾತ್ರವಲ್ಲ; ಮುಂದೆಂದಿಗೂ ಪ್ರಸ್ತುತ ಎನಿಸುವಷ್ಟು ಹೃದಯಂಗಮವಾಗಿ ಮೂಡಿ ಬಂದಿದೆ.
©2024 Book Brahma Private Limited.