ಮಡಿವಾಳ ಮಾಚಿದೇವರು 12ನೇ ಶತಮಾನದ ಶಿವಶರಣರು ಪರಿಶುದ್ಧ ಕಾಯಕಕ್ಕೆ ಹೆಸರಾದವರು. ಬಸವಣ್ಣನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದವರು. ಇಂತಹ ಮಹಾನುಭಾವರ ಕುರಿತು ತೊರವಿ ಸಿದ್ಧಲಿಂಗ ಕವಿಯು ಮಡಿವಾಳ ಮಾಚೀದೇವರ ಭಕ್ತಿ, ಕಾಯಕ-ವೈರಾಗ್ಯದ ಚಿಂತನೆ, ಜೀವನ ಸಾರ್ಥಕತೆಯ ರೀತಿ ಇತ್ಯಾದಿ ಕುರಿತು ರಚಿಸಿದ ಸಾಹಿತ್ಯವನ್ನು ಲೇಖಕ ಡಾ. ಶಾಂತಪ್ಪ ಎನ್. ಡಂಬಳ ಹಾಗೂ ಡಾ. ಸುರೇಂದ್ರಕುಮಾರ ಕೆರಮಗಿ ಅವರು ಸಂಪಾದಿಸಿದ್ದಾರೆ. ಇತಿಹಾಸ ಹಾಗೂ ಪುರಾಣ ಎರಡನ್ನೂ ಸಮೀಕರಿಸಿ ತೌಲನಿಕವಾಗಿ ಬರೆದ ಸಾಹಿತ್ಯವಾಗಿ ಈ ಕೃತಿಯು ಸಂಶೋಧನಾ ವಿದ್ಯಾರ್ಥಿಗಳಿಗೆ ಉಪಯುಕ್ತ ಕೃತಿಯಾಗಿದೆ.
©2024 Book Brahma Private Limited.