ದಾಕ್ಷಾಯಿಣಿ ಪುಸ್ತಕವನ್ನು ಲೇಖಕ ಎನ್.ಎಸ್. ಅನಂತರಂಗಾಚಾರ್ ಅವರು ರಚಿಸಿದ್ದಾರೆ. ನಿರ್ಮಲ ಮನಸ್ಸು, ದೃಢ ನಿಶ್ಚಯ, ಪತಿಭಕ್ತಿಗೆ ಇನ್ನೊಂದು ಹೆಸರು; ದೇವತೆಗಳಿಂದ, ಮನ್ಮಥನಿಂದ ಆಗದುದನ್ನು ತನ್ನ ಭಕ್ತಿ-ಪ್ರೇಮಗಳ ಮೂಲಕ ಸಾಧಿಸಿದ ಕೀರ್ತಿಶಾಲಿನಿ; ಪತಿಗೆ ಅಪಮಾನವಾದಾಗ ಪ್ರಾಣತ್ಯಾಗ ಮಾಡಿದ ಮಹಾಸಾಧ್ವೀಮಣಿ ದಾಕ್ಷಾಯಿಣಿ ಎಂದು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ದಾಕ್ಷಾಯಿಣಿಯ ಬಾಲ್ಯ ಜೀವನ, ಮದುವೆಯ ಸಂದರ್ಭ, ಭಕ್ತಿ ಮತ್ತು ಪ್ರೇಮದ ಓಳನೋಟಗಳು ಹೀಗೆ ದಾಕ್ಷಾಯಿಣಿ ಬದುಕಿನ ವಿವಿಧ ಘಟ್ಟಗಳನ್ನು ಲೇಖಕರು ಇಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.
©2024 Book Brahma Private Limited.