ಪ್ರಾಚೀನ ಭಾರತದ ಮಹರ್ಷಿಗಳು (ಭಾಗ-3)-ಈ ಕೃತಿಯು ಮಹರ್ಷಿಗಳ ಜೀವನ ಚರಿತ್ರೆಯನ್ನು ಕಟ್ಟಿಕೊಡುತ್ತದೆ. ಲೇಖಕಿ ಎಸ್. ಹೇಮಲತಾ ಅವರು ರಚಿಸಿದ್ದಾರೆ. ಭಾರತದಲ್ಲೊಂದು ಶ್ರೀಮಂತ ಪರಂಪರೆ, ಐದಾರು ಸಾವಿರ ವರ್ಷಗಳ ನಿರಂತರ ಇತಿಹಾಸ, ಭೂಮಿಯ ಸೌಂಧರ್ಯವನ್ನು ಸ್ವಾಸ್ಥ್ಯವನ್ನು ಸಮತೋಲನವನ್ನು ಕಾಪಾಡಬಲ್ಲ ಸಾಂಸ್ಕೃತಿಕ-ಸಾಹಿತ್ಯಿಕ ಸಂಪನ್ಮೂಲ ಇದೆ. ಇವೆಲ್ಲಕ್ಕೂ ಮೂಲಕಾರಣವಾಗಿರುವ ’ಧರ್ಮ’ವಿದೆ. ಈ ನಮ್ಮ ಸಂಸ್ಕೃತಿ-ಧರ್ಮವನ್ನು ನಿರಂತರ ಆಚರಣೆಯಲ್ಲಿ ಉಳಿಸಿ, ಅದನ್ನು ಸಾರ್ವಕಾಲಿಕವಾಗಿಸಿದವರು ಈ ದೇಶದ ಋಷಿ ಪರಂಪರೆ ಅಥವಾ ಮಹರ್ಷಿಗಳು. ಕೃತಿಯಲ್ಲಿ, 48 ಮಹರ್ಷಿಗಳ ಜೀವನ ಪರಿಚಯವಿದೆ.
©2024 Book Brahma Private Limited.