ಈ ಕೃತಿಯಲ್ಲಿ ಬಾವು ಗ್ರಾಮದ ಚರಿತ್ರೆ ದೇವಾಲಯದ ನಿರ್ಮಾಣ, ದೇವತಾರ್ಚನೆ, ಗರುಡಪಟ್ಟ (ಶ್ರೀ ಲಕ್ಷ್ಮೀ ರಂಗನಾಥನ ಕಲ್ಯಾಣ), ಸಮಾರಾಜ್ (ಸಮಾರಾಧನೆ), ಜಾತ್ರೆಯ ಮೊದಲನೆಯ ದಿನ ಶ್ರೀ ಲಕ್ಷ್ಮೀ ರಂಗನಾಥನ ರಥೋತ್ಸವ, ಜಾತ್ರೆಯ ಎರಡನೆಯ ದಿನ ಶ್ರೀ ಲಕ್ಷ್ಮೀ ರಂಗನಾಥನ ಓಕುಳಿ (ನೀರೋಕುಳಿ), ಜಾತ್ರೆಯ ಮೂರನೆಯ ದಿನ ಗುಡ್ಡದ ತಿಮ್ಮಯ್ಯನ ಪರಾವ, ದಿಂಡರಕಿ, ಊರಲ್ಲಿ ದೇವರು ಬರುವ ಪದ್ಧತಿ, ಶಾಸನಗಳು ಹಾಗೂ ಕುರುಹುಗಳು, ಶ್ರೀ ವಿಠಲ-ರುಕ್ಕಿಣಿ ದೇವಾಸ್ಥಾನ, ಶ್ರೀ ಸದ್ಗುರು ಪೂರ್ಣಾನಂದ ಆಶ್ರಮ, ಶ್ರೀ ಶ್ರದ್ಧಾನಂದ ಮಹಾಸ್ವಾಮಿಗಳು, ಶ್ರಾವಣ ಮಾಸದ ಕೊನ ಶುಕ್ರವಾರ ಗುಡ್ಡದ ತಿಮ್ಮಯ್ಯನ ಪರುಷ, ಶ್ರಾವಣ ಮಾಸದ ಕೊನೆ ಶನಿವಾರ ಶ್ರೀ ಲಕ್ಷ್ಮೀ ರಂಗನಾಥನ ಪರುಷ, ರಾವಣ ಮಾಸದ ಕೊನೆ ಸೋಮವಾರ ಆಣಿಸಿದ್ದಪನ ಪರುವ, ಬಾಬುದಾರರು, ಗ್ರಾಮದ ಇತರ ದೇವಸ್ಥಾನಗಳು, ಗ್ರಾಮದಲ್ಲಿನ ಪ್ರಮುಖ ಮನರಂಜನಾ ಚಟುವಟಿಕೆಗಳು, ಭೌಗೋಳಿಕ ಅಂಶಗಳನ್ನು ಇಲ್ಲಿ ದಾಖಲಿಸಿದ್ದಾರೆ. ಉದ್ಭವ ಮೂರ್ತಿ ರಂಗನಾಥನ ಜಾತ್ರೆ, ಇತಿಹಾಸ, ಕುರುಹುಗಳು, ಸಂಶೋಧನೆ, ಶಾಸನ, ವೀರಗಲ್ಲು, ಗುಹೆ ಸೇರಿದಂತೆ ಶ್ರೀ ರಂಗನ ಸ್ಥಳದಲ್ಲಿನ ವಿಶಿಷ್ಟ ಆಚರಣೆಗಳು, ಪದ್ಧತಿಗಳ ಕುರಿತು ಈ ಕೃತಿ ಬೆಳಕು ಚೆಲ್ಲುತ್ತದೆ, ಇತಿಹಾಸ ವಿದ್ಯಾರ್ಥಿಗಳಿಗೆ ಆಕರ ಗ್ರಂಥವಾಗಿ ಹೊರ ಹೊಮ್ಮಿದೆ. ಸತತ ಅಧ್ಯಯನ, ನಿರಂತರ ಸಂಶೋಧನೆ ಫಲವಾಗಿ ರಾ.ಹ. ಕೊಂಡಕೇರ ಈ ಗ್ರಂಥವನ್ನು ಅನಾವರಣಗೊಳಿಸಿದ್ದಾರೆ ಟಿ.ಕುಲಕರ್ಣಿ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.