ಯಶವಂತ ಚಿತ್ತಾಲರು ಪಾಲಿಮರ್ ತಂತ್ರಜ್ಞಾನದಲ್ಲಿ ವಿಶೇಷ ಪರಿಣತಿಯನ್ನು ಗಳಿಸಿರುವ ವಿಜ್ಞಾನಿ. ಸೃಜನಶೀಲ ಸಾಹಿತ್ಯ ಅವರ ಆಸಕ್ತಿಯ ಕ್ಷೇತ್ರ. ತಮ್ಮ ಹುಟ್ಟೂರಾಗಿರುವ ಹನೇಹಳ್ಳಿ ಮತ್ತು ನೆಲೆಸಿದ ನಗರ ಮುಂಬೈಯನ್ನು ತಮ್ಮ ಕ್ರಿಯಾಶೀಲತೆಯ ಕೇಂದ್ರವಾಗಿರಿಸಿಕೊಂಡ ಚಿತ್ತಾಲರು ಕನ್ನಡದ ಅತ್ಯುತ್ತಮ ಕತೆಗಾರರು. ನವ್ಯರಿಗಿಂತಲೂ ಭಿನ್ನವಾದ ಕಥನಶೈಲಿ ಅವರದಾಗಿತ್ತು. ಕನ್ನಡದ ಹಿರಿಮೆಯನ್ನು ಇತರ ಭಾಷಾವಲಯಗಳಿಗೆ ವಿಸ್ತರಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. 1983 ರಲ್ಲಿ ತಮ್ಮ 'ಕಥೆಯಾದಳು ಹುಡುಗಿ' ಕಥಾಸಂಕಲನಕ್ಕೆ ಯಶವಂತ ಚಿತ್ತಾಲರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಪ್ರಸ್ತುತ ಕೃತಿ ಯಶವಂತ ಚಿತ್ತಾಲರ ಜೀವನ ಮತ್ತು ಸಾಧನೆಯನ್ನು ವಿವರಿಸುತ್ತದೆ. ಲೇಖಕ, ವಿಮರ್ಶಕ, ಅನುವಾದಕ ಡಾ. ಕೆ.ಎಲ್. ಗೋಪಾಲಕೃಷ್ಣಯ್ಯ ಅವರು ಈ ಪರಿಚಯಾತ್ಮಕ ಪುಸ್ತಕದ ಲೇಖಕರು.
©2024 Book Brahma Private Limited.