ಆಧುನಿಕ ವೇಶ್ಯೆಯರ ಅಥವಾ ಲೈಂಗಿಕ ಕಾರ್ಯಕರ್ತೆಯರ ಪರಿಚಯದ ಹಿನ್ನೆಲೆಯಲ್ಲಿ ಭದ್ರಬುನಾದಿಯಂತೆ ಪೂರಕವಾಗಿ ಪ್ರಾಚೀನ ಕಾವ್ಯಪುರಾಣ – ಇತಿಹಾಸಗಳಲ್ಲಿ ಇರುವ ವೇಶ್ಯಾ ಲೋಕದ ವಿವಿಧ ಆಯಾಮಗಳನ್ನು ಲೇಖಕ ಪ್ರೊ. ಶಿವರಾಮಯ್ಯ ಅವರು ’ ವೇಶ್ಯೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರು ನಡೆದು ಬಂದ ದಾರಿ’ ಕೃತಿಯಲ್ಲಿ ಪರಿಚಯಿಸಿದ್ದಾರೆ.
ವೇಶ್ಯಾವೃತ್ತಿ (ಪ್ರಾಸ್ಟಿಟ್ಯೂಶನ್ ) , ಪ್ರಾಚೀನ ಕಾವ್ಯಗಳಲ್ಲಿ ವೇಶ್ಯಾವಾಟಿಕೆ ವರ್ಣನೆ, ವೇಶ್ಯೆಯರು ಯಾರು ?, ಎನ್ನುವ ಅನೇಕ ಮಾಹಿತಿ, ವಿವರಗಳನ್ನು ನೀಡುತ್ತದೆ. ಇದಕ್ಕೆ ಪೂರಕವಾಗಿ ಲೇಖಕರು ಮಾಹಿತಿ ಸಂಗ್ರಹ ಮತ್ತು ಸಂಶೋಧನೆಯು ಲೈಂಗಿಕ ಅಲ್ಪಸಂಖ್ಯಾತರು (ಟ್ರಾನ್ಸ್ ಜೆಂಡರ್ಸ್) ಯಾರು? ಸಲಿಂಗ ಕಾಮಿಗಳು (ಗೇಸ್ ಮತ್ತು ಲೆಸ್ಬಿಯನ್ಸ್) ಯಾರು ? ಎನ್ನುವ ಸಂಗತಿಗಳನ್ನೂ ಕುರಿತು ಚರ್ಚಿಸುತ್ತದೆ.
©2024 Book Brahma Private Limited.