ತೆರೆದಂತೆ ಹಾದಿ

Author : ಜಯಶ್ರೀ ಬಿ. ಕದ್ರಿ

Pages 168

₹ 150.00

Synopsys

ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿರುವ ಜಯಶ್ರೀ ಬಿ. ಕದ್ರಿ ಅವರ ವೈಚಾರಿಕ ಬರಹಗಳ ಸಂಗ್ರಹ. ಸಾಹಿತ್ಯ, ಸಮಾಜ, ವಿಚಾರ ಹೀಗೆ ಬೇರೆ ಬೇರೆ ಮಗ್ಗುಲುಗಳಲ್ಲಿ ಬರಹಗಳು ಹೊರಳುತ್ತವೆ. ಈ ಕೃತಿಗೆ ವೈಚಾರಿಕ ಹಣೆಪಟ್ಟೆ ಅಷ್ಟು ಒಗ್ಗುವುದಿಲ್ಲ. ಯಾಕೆಂದರೆ ಇಲ್ಲಿರುವ ಲೇಖನಗಳು ಒಂದು ನಿರ್ದಿಷ್ಟ ಉದ್ದೇಶಗಳಿಂದ ಹುಟ್ಟಿದವುಗಳಲ್ಲ. ಲಾಲಿತ್ಯ ಬರಹಗಳ ಹೆಗ್ಗಳಿಕೆ. ಆದರೂ ವರ್ತಮಾನದ ಹತ್ತು ಹಲವು ವಿಷಯಗಳು ಕೃತಿಯಲ್ಲಿ ಚರ್ಚೆಗೊಳಗಾಗುತ್ತವೆ. ಇಲ್ಲಿ ಒಟ್ಟು 55 ಲೇಖನಗಳಿವೆ. ಹೆಚ್ಚಿನವುಗಳು ಮಹಿಳೆಯರ ಬದುಕು ಬವಣೆಗಳನ್ನು ಕೇಂದ್ರವಾಗಿಟ್ಟುಕೊಂಡು ರಚನೆಗೊಂಡಿವೆ. ಇದೇ ಸಂದರ್ಭದಲ್ಲಿ ಟೀನೇಜ್‌, ಫೇಸ್‌ಬುಕ್, ಸೈಬರ್ ಫೆಮಿನಿಸಂ, ಲಿಪ್‌ಸ್ಟಿಕ್, ಸೌಂದರ್ಯ ಲಹರಿ ಹೀಗೆ ದಿನ ನಿತ್ಯದ ಬದುಕಿನಲ್ಲಿ ಅವಿನಾಭಾವವಾಗಿರುವ ಹಲವು ಸಂಗತಿಗಳ ಕುರಿತು ಲೇಖಕರು ಇಲ್ಲಿ ಸರಳವಾಗಿ ನಿರೂಪಿಸುತ್ತಾರೆ. ಬಾಲ್ಯ, ಮದುವೆ ಮೊದಲಾದವುಗಳನ್ನು ಹೆಣ್ಣು ಕಣ್ಣುಗಳಲ್ಲಿ ನೋಡಿ ಇಲ್ಲಿ ಚರ್ಚಿಸುತ್ತಾರೆ.

About the Author

ಜಯಶ್ರೀ ಬಿ. ಕದ್ರಿ
(13 March 1975)

ಜಯಶ್ರೀ ಬಿ. ಕದ್ರಿ ಅವರು 1975 ಮಾರ್ಚ್ 13 ಕಾಸರಗೂಡಿನಲ್ಲಿ ಜನಿಸಿದರು. ಮೂಡುಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ತೆರೆದಂತೆ ಹಾದಿ’ ಎಂಬ ವೈಚಾರಿಕ ಬರಹ ಸಂಕಲನ ಅವರ ಚೊಚ್ಚಲ ಕೃತಿ.  ...

READ MORE

Related Books