ಕನ್ನಡದ ಪ್ರಮುಖ ಸಾಹಿತಿ ಎಸ್.ನಾರಾಯಣ ಶೆಟ್ಟಿಯವರು ’ಸುಜನಾ’ ಎಂಬ ಕಾವ್ಯನಾಮದಿಂದ ಚಿರಪರಿಚಿತರು. ಗ್ರೀಕ್ ಭಾಷೆಯ ’ಏಜಾಕ್ಸ್’ ಎಂಬ ನಾಟಕವನ್ನು ಭಾಷಾಂತರ ಮಾಡಿರುವ ಅವರ ’ಯುಗಸಂಧ್ಯಾ’ ಎಂಬ ಕೃತಿಗೆ 2002ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ’ಹೃದಯ ಸಂವಾದ’ ಎಂಬ ಕೃತಿಗೆ 1963 ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಸುಜನಾ ಅವರ ಬದುಕು-ಸಾಧನೆಗಳನ್ನು ಈ ಪುಸ್ತಕದಲ್ಲಿ ವಿವರವಾಗಿ ನೀಡಲಾಗಿದೆ.
(ಹೊಸತು, ಫೆಬ್ರವರಿ 2013, ಪುಸ್ತಕದ ಪರಿಚಯ)
ಭಾರತೀಯ ಸಾಹಿತ್ಯ ಲೋಕದ ಅತ್ಯುನ್ನತ, ಶ್ರೇಷ್ಠ ಪ್ರಶಸ್ತಿಗಳಲ್ಲಿ ಜ್ಞಾನಪೀಠ ಪ್ರಶಸ್ತಿಯ ನಂತರದ ಸ್ಥಾನ ಕೇ೦ದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕಿದೆ. ಸುಮಾರು 2000ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಂಪರೆ ಧನಪೀಠ ಪ್ರಶಸ್ತಿಯಲ್ಲದೆ, ಸುಮಾರು ಐವತ್ತಕ್ಕೂ ಅಧಿಕ ಅಕಾಡೆಮಿ ಪುರಸ್ಕಾರಗಳಿಗೆ ಭಾಜನವಾಗಿರುವುದು. ಕನ್ನಡ ಸಾಹಿತ್ಯ ಸಮೃದ್ಧತೆಗೆ ಸಾಕ್ಷಿಯಾಗಿದೆ. ಇಂತಹ ಶ್ರೇಷ್ಠ ಪ್ರಶಸ್ತಿಯ ಪುರಸ್ಕೃತರಲ್ಲಿ ಸುಜನಾ ಸಹ ಒಬ್ಬರು, ಸುಜನಾರ ಬದುಕು ಹಾಗೂ ಕೃತಿಗಳ ಕುರಿತ ಬರಹಗಳು ಇಲ್ಲಿಯ ತನಕ ಸಂಕ್ಷಿಪ್ತ ಲೇಖನಗಳಿಗೆ ಸೀಮಿತವಾಗಿದ್ದು, ಸಮಗ್ರ ಮಾಹಿತಿಯ ದೃಷ್ಟಿಯಿಂದ ಕೊರತೆಯನ್ನು ಅನುಭವಿಸುತ್ತಿದ್ದವು, ಆದರೆ, ಈ ಕೃತಿ ಸುಜನಾರ ಜೀವನ-ಸಾಧನೆಗಳ ಸಮಗ್ರ ಪರಿಚಯವನ್ನು ಮಾಡಿಕೊಡುವುದಲ್ಲದೆ ಕೃತಿಗಳ ವಿಮರ್ಶಾತ್ಮಕ ಸಮೀಕ ಪ್ರಶಸ್ತಿ ಪುರಸ್ಕೃತ ಕೃತಿಗಳ ಸವಿವರ ವಿಮರ್ಶೆ, ಕೃತಿಸೂಚಿ, ಬದುಕಿನ ಮುಖ್ಯ ವರ್ಷಗಳು, ಪ್ರಶಸ್ತಿ-ಪುರಸ್ಕಾರಗಳ ಪಟ್ಟಿಗಳನ್ನೊಳಗೊಂಡ ವಿವರಗಳ ಸಮಗ್ರ ಮಾಹಿತಿಯನ್ನು ಒದಗಿಸುತ್ತದೆ. ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರು ಮಾಲೆಯಲ್ಲಿ ಪ್ರಕಟವಾಗುತ್ತಿರುವ ಕೃತಿ ಇಲ್ಲಿಯತನಕ ಅನುಭವಿಸಿದ ಕೊರತೆಯನ್ನು ನೀಗುತ್ತದೆ. ಅಲ್ಲಲ್ಲಿ ಮುಖಸ್ತುತಿಯ ಅಂಶಗಳಿದ್ದರೂ ಅದು ಸಹ ಎನಿಸುತ್ತದೆ. ಹೀಗೆ ಪ್ರಶಸ್ತಿ ಪುರಸ್ಕೃತರ ಮಾಲೆಯನ್ನು ಪ್ರಕಟಿಸುವುದು ದುಬಾರಿ ಹಾಗೂ ಶ್ರಮದಾಯಕವಾದುದು. ಈ ಕೃತಿ ಸುಜನಾರ ಬದುಕು-ಬರಹಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡುವ ಮೂಲಕ ಈವರೆಗಿನ ಕೊರತೆಯನ್ನು ನೀಗಿದೆ ಎಂಬುದರಲ್ಲಿ ಸಂಶಯವಿಲ್ಲ.
©2024 Book Brahma Private Limited.