ಲೇಖಕ ಸತ್ಯನಾರಾಯಣರಾವ್ ಅಣತಿ ಅವರ ಮಕ್ಕಳ ನಾಟಕ ‘ಶಾಂಪೂ ರಾಜಕುಮಾರಿ’. ಈ ಕೃತಿಗೆ ಮುನ್ನುಡಿ ಬರೆದ ರಂಗಕರ್ಮಿ ಇಕ್ಬಾಲ್ ಅಹಮದ್ ‘ಈ ನಾಟಕದಲ್ಲಿ ನಾಟಕೀಯ ಘಟನಾವಳಿಗಳು ಕಡಿಮೆ ಇದ್ದಾಗಿಯೂ ಇದು ಒಳ್ಳೆಯ ನಾಟಕವೆನಿಸಲು ಕಾರಣ ಅವರು ಬರೆದಿರುವ ಹಳೆಯ ಹೊಸ ಶಿಶುಪ್ರಾಸಗಳು. ಆಧುನಿಕ ಶಿಶುಪ್ರಾಸಗಳನ್ನು ಬರೆಯುವುದು ಅಷ್ಟು ಸುಲಭದ ಕೆಲಸವಲ್ಲ. ಅದನ್ನು ಬರೆದು ತೋರಿಸಿದ್ದಾರೆ. ಈ ನಾಟಕ ಗೀತರೂಪಕವಾಗಿ ರಂಗದ ಮೇಲೆ ವಿಜೃಂಭಿಸುತ್ತದೆ ಎನ್ನುವುದರಲ್ಲಿ ದೂಸರಾ ಮಾತಿಲ್ಲ. ನನ್ನ ಬಾಲ್ಯದಲ್ಲಿ ಆಟ ಆಡುವಾಗ ನಾವು ಬಳಸುತ್ತಿದ್ದ ಶಿಶುಗೀತೆಗಳನ್ನು ನೆನಪಿಸಿಕೊಟ್ಟಿದ್ದಾರೆ. ಉದಾ- 'ಕಣ್ಣಾಮುಚ್ಚೆ ಕಾಡೇಗೂಡೆ' 'ರತ್ತೋ ರತ್ತೋ ರಾಯನ ಮಗಳೆ' ಇತ್ಯಾದಿ ಪ್ರಾಸಗಳನ್ನೇ ಬರೆಯುತ್ತಾ, ಇದ್ದಕ್ಕಿದ್ದ ಹಾಗೆ ಇಂದಿನ ಆಧುನಿಕ ಜಗತ್ತಿನ ವಸ್ತುಗಳ ಧ್ವನಿಯ ಆವಿಷ್ಕಾರಗಳನ್ನು ತಮ್ಮ ಶಿಶುಪ್ರಾಸಗಳಲ್ಲಿ ಸೇರಿಸಿ ಕೊಳ್ಳುವುದು ಮತ್ತು ಸಹಜವೆನಿಸುವಂತೆ ಹಾಡುವುದು ಇವರ ಬರವಣಿಗೆಯ ವಿಶೇಷ ಗುಣವಾಗಿದೆ.’ ಎಂದು ಪ್ರಶಂಸಿದ್ದಾರೆ.
©2024 Book Brahma Private Limited.