ಲೇಖಕ ಬಿ.ವಿ. ಕಾರಂತ ಅವರ ನಾಟಕ ಕೃತಿ ʻಮಕ್ಕಳ ನಾಟಕಗಳುʼ. ಬಿ.ವಿ. ಕಾರಂತರು ಬಹಳ ಹಿಂದೆಯೇ ಬರೆದು ಪ್ರಯೋಗಿಸಿದ್ದ, ಮತ್ತು ಪ್ರದರ್ಶನಗಳಲ್ಲಿ ಪ್ರಸಿದ್ಧವೂ ಆಗಿದ್ದ ಮೂರು ನಾಟಕಗಳು ಇಲ್ಲಿ ಒಟ್ಟಾಗಿ ಪ್ರಕಟವಾಗಿದೆ. ಮೊದಲನೆಯ ನಾಟಕ ʻಪಂಜರಶಾಲೆʼಯು ರವೀಂದ್ರನಾಥ ಟಾಗೋರ್ ಅವರ ಕಥೆ ಆಧರಿಸಿದ್ದು. ಎರಡನೆಯ ನಾಟಕ ʻಹೆಡ್ಡಾಯಣವುʼ ಪಂಜೆ ಮಂಗೇಶರಾಯರ ಕಥೆಯನ್ನು ನೆನಪಿಸಿಕೊಂಡು ಬರೆದದ್ದು. ಮೂರನೆಯ ನಾಟಕ ʻನೀಲಿಕುದುರೆʼಯು ಪೋರ್ಚುಗೀಸ್ ಮೂಲವೊಂದರಿಂದ ಪ್ರೇರಿತವಾದದ್ದು. ಬಿ.ವಿ. ಕಾರಂತರ ರಂಗಮಾರ್ಗವನ್ನು ಪ್ರತಿನಿಧಿಸುವ ಈ ಸಂಕಲನವು ಪ್ರಯೋಗಕಾರರಿಗೂ ಸಂಶೋಧಕರಿಗೂ ಉಪಯುಕ್ತವಾಗಲಿದೆ.
©2024 Book Brahma Private Limited.