‘The two Gentlemen of verona' ಎಂಬುದು ಶೆಕ್ಸ್ ಪಿಯರ್ ಅವರ ನಾಟಕ. ಈ ನಾಟಕವನ್ನು ಸಣ್ಣ ವೃತ್ತಾಂತವಾಗಿಸಿ ಮಕ್ಕಳಿಗೆ ತಿಳಿಯುವ ಹಾಗೆ ರಚಿಸಿದವರು-ಪ್ರೊ. ಎಲ್.ಎಸ್. ಶೇಷಗಿರಿರಾವ್. ರೋಮ್ಯಾಂಟಿಕ್ ಹಾಗೂ ವಿನೋದಾತ್ಮಕ ನಾಟಕವಿದು. ಈ ನಾಟಕವು ಶೇಕ್ಸ್ ಪಿಯರ್ ನ ಮೊದಲ ನಾಟಕ ಎಂದು ನಂಬಲಾಗಿದೆ. ವ್ಯಾಲಂಟನ್ ಹಾಗೂ ಪ್ರೋಟಿಅಸ್ ಎಂಬ ಇಬ್ಬರು ಸ್ನೇಹಿತರ ಮಧ್ಯೆ ಇರುವ ಸಂಬಂಧ ಕುರಿತದ್ದು. ಇಬ್ಬರು ಪ್ರೇಮಕ್ಕೆ ಸಿಲುಕಿದಾಗ ಅವರ ಸ್ನೇಹಕ್ಕೆ ಏನಾಗುತ್ತದೆ ಎಂಬುದೇ ಇಲ್ಲಿಯ ವಸ್ತು. ಮಕ್ಕಳಿಗಾಗಿ ಬರೆದ ನಾಟಕ ಇದಾಗಿದ್ದು, ಸರಳ ಭಾಷೆಯು ಓದುವ ತೀವ್ರತೆಯನ್ನು ಹೆಚ್ಚಿಸುತ್ತದೆ.
©2025 Book Brahma Private Limited.