ಧಾಂ ಧೂಂ ಸುಂಟರಗಾಳಿ ವೈದೇಹಿ ಅವರ ಮಕ್ಕಳ ನಾಟಕವಾಗಿದೆ. ವೈದೇಹಿ, ತಮ್ಮ ಘನವಾದ ಕಥೆ ಕಾವ್ಯಗಳನ್ನು ಹಿರಿಯರಿಗೆ ಬರೆಯುವುದರ ಜೊತೆಗೇ ಅಕರ್ಷಕವಾದ ಮಕ್ಕಳ ನಾಟಕಗಳನ್ನೂ ಬರೆಯುತ್ತಾ ಬಂದಿದ್ದಾರೆ. ಪ್ರಸ್ತುತ ಧಾಂ ಧೂಂ ನಾಟಕ ಮಕ್ಕಳ ನಿಲುಕಿಗೆ ದಕ್ಕುವಂತೆ ಮುಗ್ಧತೆಯ ಜರಡಿಯಲ್ಲಿ ಸೋಸಿ ಕೊಟ್ಟ ಅಪರೂಪದ ಕೃತಿ. ರಂಗದ ಮೇಲೆ ಈ ನಾಟಕ ಮಕ್ಕಳಿಗೆ ರೋಚಕವಾದ ಅನುಭವ ನೀಡುತ್ತದೆ ಎಂದು ಡಾ. ಹೆಚ್.ಎಸ್.ವೆಂಕಟೇಶಮೂರ್ತಿಯವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ
©2025 Book Brahma Private Limited.