All's Well Thats Ends Well-ಎಂಬುದು ಶೆಕ್ಸ್ ಪಿಯರ್ ನ ನಾಟಕ. ಶೆಕ್ಸ್ ಪಿಯರ್ ಮಕ್ಕಳ ಕಥಾಲೋಕ ಸರಣಿಯಡಿ ಈ ಕೃತಿ ಪ್ರಕಟಿಸಿದೆ. ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರು ಈ ನಾಟಕವನ್ನು `ಎಲ್ಲವೂ ಒಳ್ಳೆಯದು ಮುಕ್ತಾಯವೂ ಒಳ್ಳೆಯದೇ’ ಶೀರ್ಷಿಕೆಯಡಿ ಸಣ್ಣ ವೃತ್ತಾಂತವಾಗಿಸಿ, ಮಕ್ಕಳಿಗೆ ತಿಳಿಯುವ ಹಾಗೆ ಸರಳ ಭಾಷೆಯಲ್ಲಿ ರಚಿಸಿದ್ದಾರೆ. ಒಬ್ಬ ಪ್ರಸಿದ್ಧ ವೈದ್ಯನ ತಬ್ಬಲಿ ಮಗಳು (ಹೆಲನ್) ಹಾಗೂ ಅವಳ ಪೋಷಕಳ ಮಗನ (ಬರ್ ಟ್ಯ್ರಾಮ್) ಮಧ್ಯೆ ಇರುವ ಸಂಬಂಧವು ಈ ನಾಟಕ ವಸ್ತು. ಹೆಲನ್ ಗೆ ಪ್ರೇಮವಿದ್ದು, ಬರ್ ಟ್ಯ್ರಾಮ್ ನಲ್ಲಿ ಅವಳ ಬಗ್ಗೆ ಪ್ರೇಮವಿರದು. ಆದರೂ, ಆತನೇ ತನ್ನ ಪತ್ನಿಯನ್ನಾಗಿಸಲು ಏನೆಲ್ಲ ಕಸರತ್ತು ಮಾಡುತ್ತಾಳೆ. ಆದದ್ದೆಲ್ಲವೂ ಒಳಿತೇ ಆಗುತ್ತದೆ. ಆಗುವುದೆಲ್ಲವೂ ಒಳಿತೇ ಆಗುವುದು ಎಂಬ ಭಗವದ್ಗೀತೆಯ ಸಂದೇಶವು ಈ ನಾಟಕದ ವಸ್ತುವೂ ಆಗಿದೆ. ಲಲಿತ ಶೈಲಿಯ ಚಿತ್ರಗಳು ಮಕ್ಕಳನ್ನು ಸೆಳೆಯುತ್ತವೆ.
©2024 Book Brahma Private Limited.