4 ಮಕ್ಕಳ ನಾಟಕಗಳು

Author : ನಾ. ಡಿಸೋಜ

Pages 68

₹ 41.00




Year of Publication: 2017
Published by: ಗೀತಾಂಜಲಿ ಪಬ್ಲಿಕೇಷನ್ಸ್
Address: #60, 2ನೇ ಡಿ ಅಡ್ಡರಸ್ತೆ, 3 ನೇ ಬ್ಲಾಕ್, ನಾಗರಬಾವಿ 2ನೇ ಹಂತ ಬೆಂಗಳೂರು-560072

Synopsys

ಕಾದಂಬರಿ, ಕಾವ್ಯ ವಲಯದಲ್ಲಿ ತಮ್ಮ ಛಾಪು ಮೂಡಿಸಿರುವ ನಾ. ಡಿಸೋಜ ಅವರು ಮಕ್ಕಳ ಸಾಹಿತ್ಯದಲ್ಲೂ 12ಕ್ಕೂ ಅಧಿಕ ಕೃತಿಗಳಣ್ನು ರಚಿಸಿದ್ದು, ಆ ಪೈಕಿ `4 ಮಕ್ಕಳ ನಾಟಕಗಳು’ ಒಂದು. ಮಕ್ಕಳ ಮನೋಜಗತ್ತಿನಲ್ಲಿ ಕಲ್ಪನೆಗಳನ್ನು ಸಂಭ್ರಮಿಸಿ ಆನಂದ ನೀಡುವ ವಿಷಯ ವಸ್ತುವನ್ನು ಆಯ್ಕೆ ಮಾಡಿ, ಕುತೂಹಲ ಕೆರಳಿಸುವ ಸನ್ನಿವೇಶಗಳನ್ನು ಸೃಷ್ಟಿಸಿ ಬರೆದ ಈ ನಾಟಕಗಳು, ಮಕ್ಕಳು ಮಾತ್ರವಲ್ಲ ದೊಡ್ಡವರೂ ಸಹ ಸಂಭ್ರಮಿಸುಬಹುದಾದಷ್ಟು ಕಥಾ ವಸ್ತು ಹೊಂದಿರುವ ಕೃತಿ ಇದು.

About the Author

ನಾ. ಡಿಸೋಜ

ನಾ ಡಿಸೋಜ ಬರಹಗಾರರು, ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ ಹೊಂದಿದವರು. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ ಅವರು ಹುಟ್ಟಿದ್ದು ಜೂನ್ 6, 1937 ರಲ್ಲಿ.  ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ಪ್ರಾರಂಭದ ದಿನಗಳಲ್ಲಿ 'ಪ್ರಪಂಚ' ಪತ್ರಿಕೆಗೆ ಕಥೆಗಳನ್ನು ಬರೆಯುತ್ತಿದ್ದರು. ಡಿಸೋಜರ ಮೊದಲ ಕಾದಂಬರಿ ‘ಬಂಜೆ ...

READ MORE

Related Books