ಆಶಾರಘು ಅವರು ಮಕ್ಕಳಿಗಾಗಿ ಬರೆದ ನಾಟಕಗಳ ಸಂಕಲನ ‘ಬಂಗಾರದ ಪಂಜರ’. ಕೃತಿಗೆ ಮುನ್ನುಡಿ ಬರೆದಿರುವ ನಾ. ದಾಮೋದರ ಶೆಟ್ಟಿ ಅವರು “ಇಲ್ಲಿನ ನಾಲ್ಕು ನಾಟಕಗಳು ನಾಲ್ಕು ವಿಭಿನ್ನ ಸಂದೇಶಗಳನ್ನು ನೀಡುತ್ತವೆ. ಜಾನಪದ, ಸಂಸಾರಿಕ, ಪೌರಾಣಿಕ ವಸ್ತುಗಳನ್ನಾಯ್ದು ಅದಕ್ಕೆ ಮಕ್ಕಳ ಭಾಷೆಯ, ನವಿರಾದ ಹಾಸ್ಯದ ಲೇಪನ ಕೊಟ್ಟು, ಮಿರುಮಿರುಗುವಂತೆ ಮಾಡುವ ಕೌಶಲ್ಯವನ್ನು ಶ್ರೀಮತಿ ಆಶಾರಘು ಅವರು ಹೊಂದಿದ್ದಾರೆ. ಭಾಷೆಯ ಮೇಲಿನ ಹಿಡಿತ, ರಂಗತಂತ್ರಗಳ ಬಳಕೆ, ಕಾಲ್ಪನಿಕತೆಯನ್ನು ಮಕ್ಕಳ ಮಟ್ಟಕ್ಕೆ ಹೊಂದುವಂತೆ ದುಡಿಸಿಕೊಳ್ಳುವಿಕೆ, ರಂಗಕ್ರಿಯೆಗೆ ಅವಕಾಶ ನಿರ್ಮಿಸುವಿಕೆ ಇತ್ಯಾದಿ ಕಾರಣಗಳಿಂದಾಗಿ `ಬಂಗಾರದ ಪಂಜರ ಮತ್ತು ಇತರ ನಾಟಕಗಳು' ಸಂಕಲನ ಯಶಸ್ಸಿನೆಡೆಗೆ ಸಾಗುತ್ತವೆ ಎಂಬುದು ನನ್ನ ಅಚಲ ನಂಬಿಕೆ” ಎಂದು ಶ್ಲಾಘಿಸಿದ್ದಾರೆ.
©2025 Book Brahma Private Limited.