ಕಾತ್ಯಾಯಿನಿ ಕುಂಜಿಬೆಟ್ಟು ಅವರು ಬರೆದಿರುವ ಮಕ್ಕಳ ಮೂರು ನಾಟಕಗಳ ಕೃತಿ ಇದಾಗಿದೆ. ಕೃತಿಯ ಕುರಿತು ಮಂಡ್ಯ ರಮೇಶ್ ಅವರು ಬರೆಯುತ್ತಾ ‘ಕಾತ್ಯಾಯಿನಿ ಅವರ ನಾಟಕಗಳ ಮುಖ್ಯ ಗುಣ ಮಕ್ಕಳಿಗೆ ಇಷ್ಟಬಾಗುವ ರಂಜನೆ. ಜೀವನಮೌಲ್ಯಗಳನ್ನು ಖುಷಿಯ ಒಡಲಲ್ಲೇ ಹುದುಗಿಸಿಕೊಂಡಿವೆ. ಇವರ ನಾಟಕಗಳು ಜಾನಪದ ಸೊಗಡಿನಲ್ಲಿದ್ದರೂ ಆಧುನಿಕ ದೃಷ್ಟಿಕೋನಗಳನ್ನು ಒಳಗೊಂಡಿವೆ. ನಗು, ಕುತೂಹಲ ಮತ್ತು ಬೆರಗು ಅವರ ಎಲ್ಲ ನಾಟಕಗಳ ಸ್ಥಾಯಿಭಾವವಾಗಿದೆ. ಈ ಮೂರು ನಾಟಕಗಳನ್ನು ಮಕ್ಕಳ ಮಾತ್ರವಲ್ಲದೇ ಮಗುಮನಸ್ಸಿನ ಹಿರಿಯರು ಆಸ್ವಾದಿಸಬಹುದು ಎಂದಿದ್ದಾರೆ.
©2024 Book Brahma Private Limited.