ಶೆಕ್ಸ್ ಪಿಯರನ ಪ್ರಸಿದ್ಧ ನಾಟಕಗಳ ಪೈಕಿ ‘ದಿ ಮರ್ಚೆಂಟ್ಸ್ ಆಫ್ ವೆನಿಸ್ ಒಂದು. ‘ವೆನಿಸ್ ನ ವರ್ತಕ’ ಎಂಬ ಶೀರ್ಷಿಕೆಯಡಿ ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರ ಈ ನಾಟಕದ ಸಣ್ಣ ವೃತ್ತಾಂತ ಎಂಬಂತೆ ಮಕ್ಕಳಿಗೂ ತಿಳಿಯುವ ಹಾಗೆ ಸರಳ ಭಾಷೆಯಲ್ಲಿ ರಚಿಸಿದ್ದಾರೆ. ರೋಮ್ಯಾಂಟಿಕ್ ಕಾಮಿಡಿಯ ನಾಟಕವಿದು. ಇಟಲಿಯ ಶ್ರೀಮಂತ ಆಂಟೊನಿಯೋ ಹಾಗೂ ಶ್ರೀಮಂತ ಯಹೂದಿಗಳಾದ ಷೈಲಾಕ್ ಹಾಗೂ ಫೋರ್ಷಿಯಾ ಹೀಗೆ ಮೂವರ ಮಧ್ಯೆ ನಡೆಯುವ ಚಟುವಟಿಕೆಯು ಈ ನಾಟಕದ ವಸ್ತು. ಷೈಲ್ಯಾಕ್ ಸಾಲಗಾರ. ಆಂಟೋನಿಯೋ ನಿಂದ ಷೈಲ್ಯಾಕ್ ಸಾಲ ಪಡೆಯುತ್ತಾನೆ. ನಿಗದಿತ ಸಮಯದಲ್ಲಿ ಸಾಲ ಹಿಂತಿರುಗಿಸದಿದ್ದರೆ ತನ್ನ ದೇಹದ ಒಂದು ಅಂಗದ ಒಂದು ಪೌಂಡ್ ಮಾಂಸವನ್ನು ಕೊಡಬೇಕೆಂದು ಷರತ್ತು ಆಗಿರುತ್ತದೆ. ಆದರೆ, ಬುದ್ದಿವಂತಳಾದ ಫೋರ್ಷಿಯಾ ಷೈಲ್ಯಾಕ್ ನೆರವಿಗೆ ಬರುತ್ತಾಳೆ. ಸ್ವತಃ ಮಕ್ಕಳು, ಓದಬಹುದು. ಪಾಲಕರು ಓದಿ ಮಕ್ಕಳಿಗೆ ಹೇಳಬಹುದು. ಶಿಕ್ಷಕರು ಈ ಕೃತಿಯನ್ನು ಓದಿ ಸರಳವಾಗಿ ಮಕ್ಕಳಿಗೆ ತಿಳಿ ಹೇಳಬಹುದು. ಪ್ರಸಿದ್ಧ ನಾಟಕವೊಂದರ ಸರಳ ನಿರೂಪಣೆಯು ಈ ಕೃತಿಯ ವೈಶಿಷ್ಟ್ಯ.
©2025 Book Brahma Private Limited.