ಕಾಡದಿಬ್ಬದಲಿ ಪಾಠ ಕಲಿತ ಕಳ್ಳರು- ಈ ನಾಟಕವನ್ನು ಕವಿ ಬಾಗೂರು ಮಾರ್ಕಾಂಡೇಯ ಅವರು ಮಕ್ಕಳಿಗಾಗಿ ಬರೆದಿದ್ದಾರೆ. ಕಾಡಿನಲ್ಲಿ ಪ್ರಾಣಿಗಳು ತಮ್ಮ ಪಾಡಿಗೆ ತಾವಿದ್ದು ಪ್ರಕೃತಿಯಲ್ಲಿ ಆನಂದವಾಗಿರುತ್ತವೆ ಮನುಷ್ಯ ಸ್ವಾರ್ಥಿಯಾಗಿ ಅನ್ಯರದ್ದೇ ಬಾಚಿ ತಿನ್ನಲು ಯೋಚಿಸುತ್ತಾನೆ. ಕೆಟ್ಟವನಾಗುತ್ತಾನೆ. ದ್ರೋಹಿಯಾಗುತ್ತಾನೆ. ಹೀಗೆ ಕಳ್ಳರು ಕಾಡಿನಲ್ಲಿ ಹೋಗಿ ಪರಿವರ್ತನೆಯಾಗುವ ಕತೆಯಾಗಿದ್ದು ಮಕ್ಕಳಿಗೆ ಅಪ್ಯಾಯಮಾನವಾಗುವುದರಲ್ಲಿ ಸಂಶಯವಿಲ್ಲ. ಪ್ರಾಣಿ ಪಕ್ಷಿಗಳು ಮಾತನಾಡುತ್ತವೆ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಕುತೂಹಲ ಅಂಥದೊಂದು ಕುತೂಹಲವನ್ನು ಈ ನಾಟಕದಲ್ಲಿ ಅಳವಡಿಸಿ ಬರೆದು ಅದಕ್ಕೊಪ್ಪುವ ಚಿತ್ರಗಳನ್ನು ಸ್ವತಃ ಲೇಖಕರೇ ಚಿತ್ರ ವಿನ್ಯಾಸ ಮಾಡಿದ್ದು ವಿಶೇಷ.
©2025 Book Brahma Private Limited.