ಬೆಳ್ಳಕ್ಕಿ ಕೊಡೆ

Author : ವಿನಾಯಕ ರಾ. ಕಮತದ

Pages 80

₹ 90.00




Year of Publication: 2018
Published by: ಸುಭಾಷಿಣಿ ಪ್ರಕಾಶನ
Address: ಗದಗ
Phone: 9742685284

Synopsys

ವಿನಾಯಕ ರಾ. ಕಮತದ ಅವರ ಮಕ್ಕಳ ನಾಟಕಗಳ ಸಂಗ್ರಹ ಬೆಳ್ಳಕ್ಕಿ ಕೊಡೆ. ಮಕ್ಕಳ ಆಸಕ್ತಿಗಳು ಆಧುನಿಕಗೊಳ್ಳುತ್ತಿರುವ ಈ ಕಾಲದಲ್ಲಿ ಪರಿಸರ ಪ್ರಜ್ಞೆ, ಪ್ರಾಣಿಗಳ ರಕ್ಷಣೆ, ಶಿಕ್ಷಣದ ಮಹತ್ವ, ಪೂರ್ವಜರ ಆಹಾರ ಪದ್ದತಿ ಮತ್ತು ಮೇಲು ಕೀಳಿನ ತಾರತಮ್ಯದ ಭಾವಗಳನ್ನು ಪಕ್ಷಿಗಳ ಮೂಲಕ ತಾರ್ಕಿಕವಾಗಿ ಬಗೆ ಹರಿಸಲು ೫ ನಾಟಕಗಳ ಮೂಲಕ ಲೇಖಕರು ಪ್ರಯತ್ನಿಸಿದ್ದಾರೆ. "ಬೆಳ್ಳಕ್ಕಿ ಕೊಡೆ" ಪಕ್ಷಿಗಳ ಸಂಭಾಷಣೆಯ ಮೂಲಕ ಮನುಷ್ಯನ ಅಹಂಕಾರಕ್ಕೆ ಸವಾಲು ಹಾಕಿದರೆ, "ನಿಧಿ" ಎಂಬ ನಾಟಕ ಬಡತನದಲ್ಲಿ ಕಲಿಯ ಬರುವ ಮಕ್ಕಳ ಮೂಲಕ ಶಿಕ್ಷಣವೇ ನಿಜವಾದ ನಿಧಿ ಎಂದು ಪ್ರತಿಪಾದಿಸಿದರೆ, "ಮಂಗಗಳು" ನಾಟಕ ಮನುಷ್ಯನ ಅಸ್ವಾಭಾವಿಕ ಪ್ರಗತಿಯ ಭ್ರಮೆಗಳನ್ನು ಪ್ರಶ್ನಿಸುತ್ತದೆ. "ಮಿಸ್ ಮಜ್ಜಿಗೆ" ಅನಾರೋಗ್ಯಕರ ಪೇಯಗಳ ಹವ್ಯಾಸವನ್ನು ಪ್ರಶ್ನಿಸುತ್ತದೆ. "ಕಾಗೆ ರಾಗ" ನಾಟಕ ಕಾಗೆ ಕೋಗಿಲೆಗಳ ವಾಗ್ವಾದಗಳ ಮೂಲಕ ಮೇಲು ಕೀಳು ಭಾವಗಳ ಅಪ್ರಸ್ತುತೆಯ ಅಗತ್ಯವನ್ನು ಪ್ರತಿಪಾದಿಸುತ್ತದೆ.ಹೀಗೆ ವಿಭಿನ್ನ ವಸ್ತುಗಳನ್ನೊಳಗೊಂಡ ಈ ಸಂಕಲನದ ನಾಟಕಗಳು ಉತ್ತರ ಕರ್ನಾಟಕದ ಆಡು ಭಾಷೆ ಚುರುಕಾದ ಚಿಕ್ಕ ಚಿಕ್ಕ ಸಂಭಾಷಣೆಗಳ ಮೂಲಕ ಗಮನ ಸೆಳೆಯತ್ತವೆ ಎಂದು ಡಾ. ನಿಂಗು ಸೊಲಗಿ ಅವರು ಮುನ್ನುಡಿಯಲ್ಲಿ ಗುರುತಿಸಿರುವುದು ಸೂಕ್ತವಾಗಿದೆ. ಪ್ರಸ್ತುತ ಸಂಕಲನಕ್ಕೆ ಶ್ರೀ ಜಿ.ಬಿ. ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯಪ್ರಶಸ್ತಿ 2018 ಹಾಗೂ ಬಾಲವಿಕಾಸ ಅಕಾಡೆಮಿಯಿಂದ 2018ನೇ ಸಾಲಿನ "ಮಕ್ಕಳ ಚಂದಿರ" ಪ್ರಶಸ್ತಿ ದೊರಕಿದ್ದು ಬೆಳ್ಳಕ್ಕಿ ಕೊಡೆ ನಿಧಿ ನಾಟಕಗಳು ಅನೇಕ ಪ್ರಯೋಗಗಳನ್ನು ಕಂಡಿವೆ. ಶಾಲಾ ಕಾಲೇಜಿನಲ್ಲಿ ಪ್ರಯೋಗಿಸಲು ಉಪಯುಕ್ತವಾದ ನಾಟಕಗಳ ಸಂಕಲನವಿದಾಗಿದೆ. ಲೇಖಕರೇ ಮುಖ ಪುಟ ವಿನ್ಯಾಸ ಮಾಡಿದ್ದಾರೆ.

About the Author

ವಿನಾಯಕ ರಾ. ಕಮತದ
(29 September 1980)

ಡಾ. ವಿನಾಯಕ ರಾ. ಕಮತದ ಕವಿ, ನಾಟಕಕಾರ ಹಾಗೂ ಕಲಾವಿದರು. ಹುಟ್ಟದ್ದು 1980 ಸಪ್ಟೆಂಬರ್‌ 29ರಂದು ಗದಗ ಜಿಲ್ಲೆ ಗದಗ ತಾಲ್ಲೂಕಿನ ಬೆಂತೂರಿನಲ್ಲಿ. ಗುಲಬರ್ಗಾ ವಿಶ್ವವಿದ್ಯಾಲಯದಲ್ಲ ಎಂ.ಇಡಿ. ಪದವಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ., ಮತ್ತು ಡಾ. ಎಸ್. ಎನ್ ವೆಂಕಟಾಪೂರ ಅವರ ಮಾರ್ಗದರ್ಶನದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ "ಕನ್ನಡ ಗಜಲ್‌ಗಳಲ್ಲಿ ವಸ್ತು ಮತ್ತು ಅಭಿವ್ಯಕ್ತಿ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪದವಿ ಗಳಿಸಿದ್ದಾರೆ. 2005 ರಿಂದ 2017 ವರೆಗೆ ತೋಂಟದಾರ್ಯ ವಿದ್ಯಾಪೀಠದ ಬಿ.ಇಡಿ.ಮತ್ತು ಡಿ.ಇಡಿ. ಕಾಲೇಜುಗಳ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು ನಂತರ ...

READ MORE

Related Books