ನಾಣೀಭಟ್ಟನ ಸ್ವರ್ಗದ ಕನಸು ನಾಟಕಗಳ ಸಂಕಲನದಲ್ಲಿ ಮೂರು ನಾಟಕಗಳಿವೆ. ‘ನಾಣೀಭಟ್ಟನ ಸ್ವರ್ಗದ ಕನಸು’, ‘ಮೃಗ ಮತ್ತು ಸುಂದರಿ’ ಮತ್ತು ‘ಗೊಮ್ಬೆರಾವಣ’. ಇದರಲ್ಲಿ ಮೊದಲನೆಯದು ಮಕ್ಕಳ ಮನೋಲೋಕದ ವಿಶೇಷಗಳನ್ನು ಗುರುತಿಸುವ ಒಂದು ಕಥೆ; ಅದನ್ನು ತುಂಬ ಸ್ವಾರಸ್ಯಕರವಾದ ಘಟನೆ-ಸನ್ನಿವೇಶ ಮತ್ತು ಮಾತುಗಾರಿಕೆಗಳ ಹದದಲ್ಲಿ ಲೇಖಕರು ನಾಟ್ಯೀಕರಿಸಿದ್ದಾರೆ. ಎರಡನೆಯದು ಆಸ್ಕರ್ ವೈಲ್ಡ್‌ನ ಪ್ರಸಿದ್ಧ ಕಥೆಯನ್ನಾಧರಿಸಿದ್ದು; ಕನ್ನಡದಲ್ಲೂ ಈಗಾಗಲೇ ಹಲವರು ಮಕ್ಕಳ ನಾಟಕವಾಗಿ ರುಪಾಂತರಿಸಿರುವ ಕಥೆ ಅದು. ಮೂರನೆಯದು, ಪುರಾಣದ ಒಂದು ಮೂಲೆಯ ಘಟನೆಯನ್ನು ಎತ್ತಿಕೊಂಡು, ಅದರ ಪರಿಧಿಯ ಸುತ್ತಲೇ ಸುತ್ತುತ್ತ, ಇವತ್ತಿನದೋ ಅವತ್ತಿನದೋ ಎಂದು ಗೊತ್ತಾಗದಂಥ ಕಥನವೊಂದನ್ನು ಕಟ್ಟಲಾಗಿದೆ.
©2024 Book Brahma Private Limited.