ಉರಿ- ರುದ್ರಗೌಡ ಪಾಟೀಲ್ ಅವರು ಬರೆದ ನಾಟಕಗಳ ಸಂಕಲನ. 7 ಸಾಮಾಜಿಕ ಹಾಗೂ 1 ವೈಜ್ಞಾನಿಕ ನಾಟಕವನ್ನು ಒಳಗೊಂಡಿದೆ. ಸಾಮಾಜಿಕ ಹೊಣೆಗಾರಿಕೆಯ ಪ್ರಜ್ಞೆಯನ್ನು ಜಾಗೃತಿಗೊಳಿಸುವುದು ನಾಟಕಗಳ ಉದ್ದೇಶ.
ಅನುಕಂಪ ಬೇಡ ಅವಕಾಶ ಕೊಡಿ: ಈ ನಾಟಕವು ಅಂಗವಿಕಲ ಮಕ್ಕಳು ಹಾಗೂ ಅವರ ಪಾಲಕರು ಅನುಭವಿಸುವ ನೋವು,ಅವರಿಗೆ ಇರುವ ಅವಕಾಶಗಳ ಕುರಿತಾಗಿದ್ದರೆ, 'ದುಡಿಮೆ ಸಾಕು ಕಲಿಕೆ ಬೇಕು': ನಾಟಕವು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತಾಗಿದೆ. 'ಸಾಧಿಸುವೆವು ನಾವು': ಈ ನಾಟಕವು ಹೆಣ್ಣು ಮಕ್ಕಳ ಶೋಷಣೆ .ಹಾಗೂ ಶಿಕ್ಷಣದ ಮಹತ್ವ ತಿಳಿಸಿಕೊಡುತ್ತದೆ. 'ಹೊಸತನ': ಈ ನಾಟಕವು ಅಂಗವಿಕಲ ಮಕ್ಕಳಿಗೆ ಇರುವ ಅವಕಾಶಗಳನ್ನು ತಿಳೀಸುತ್ತಿದ್ದರೆ, 'ಬೆಳಗಲಿ ಜ್ಞಾನದ ದೀಪ': ನಾಟಕವು ಮೂಢನಂಬಿಕೆಗಳು ಹಾಗೂ ಬಾಲ್ಯ ವಿವಾಹ ಪದ್ಧತಿ ಕುರಿತು ಹೇಳುತ್ತದೆ. 'ಬೆಳಗಿದ ಬಾಳು' ನಾಟಕವು ಬಾಲ್ಯ ವಿವಾಹ ಹಾಗೂ ಶಿಕ್ಷಣದ ಮಹತ್ವ ಸಾರುತ್ತದೆ. 'ಶಿಕ್ಷಣ ಕೊಡಿಸಿ ಶೋಷಣೆ ಅಳಸಿ': ನಾಟಕವು ಶಿಕ್ಷಣದ ಮಹತ್ವ ತಿಳಿಸುತ್ತದೆ.
©2024 Book Brahma Private Limited.