ಲೇಖಕ ಎ.ಎನ್. ಪ್ರಸನ್ನ ಅವರು ಮಕ್ಕಳಿಗಾಗಿ ಬರೆದ ನಾಟಕ-ಒಂದಾನೊಂದು ಕಾಡಿನಲ್ಲಿ. ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿ ಇಂದಿಗೂ ಬರಹಗಳ ಅಭಾವ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ‘ಒಂದಾನೊಂದು ಕಾಡಿನಲ್ಲಿ’ ಕೃತಿಯು ಮಹತ್ವ ಪಡೆಯುತ್ತದೆ. 1979ರಲ್ಲಿ ಮಕ್ಕಳ ಅಂತಾರಾಷ್ಟ್ರೀಯ ವರ್ಷ ಎಂದೂ ಘೋಷಣೆಯಾಗಿತ್ತು. ಹಂಪ ನಾಗರಾಜಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಕಿರಿಯರ ಪುಸ್ತಕ ಮಾಲೆ ಆರಂಭಿಸಿ, 101 ಪುಸ್ತಕಗಳ ಪ್ರಕಟಣೆ ಕಾರ್ಯಕ್ಕೆ ಚಾಲನೆ ಸಿಕ್ಕಿತು. ಅದರ ಪರಿಣಾಮವೇ ಈ ಕೃತಿ.
ಹಂಪನಾ ಹೇಳುವಂತೆ ‘ಈ ಮಾಲೆಯ ಪುಸ್ತಕಗಳು ನಾಡಿನ ಮೂಲೆ ಮೂಲೆಯ ಮಕ್ಕಳ ಕೈ ಸೇರಿ, ಅವರ ಮನೋವಿಕಾಸಕ್ಕೆ ನೆರವಾಗುವುದೆಂಬ ಖಚಿತ ಭರವಸೆ ಇದೆ’ ಎಂದು ಕೃತಿಗಳ ಸ್ವರೂಪವನ್ನು, ಮಹತ್ವವನ್ನು ಹೇಳಿದ್ದಾರೆ.
ಬೆಂಗಳೂರಿನ ಜವಾಹರ ಬಾಲಭವನದಲ್ಲಿ (1977) ಏರ್ಪಡಿಸಿದ್ದ ಮಕ್ಕಳ ನಾಟಕ ರಚನಾ ಸ್ಪರ್ಧೆಯಲ್ಲಿ ಈ ನಾಟಕವು ದ್ವಿತೀಯ ಬಹುಮಾನ ಪಡೆದಿದೆ.
©2025 Book Brahma Private Limited.