ಚಿಟ್ಟೆ ಬೇಲೂರು ರಘುನಂದನ್ ರ ಏಕವ್ಯಕ್ತಿ ಮಕ್ಕಳ ನಾಟಕವಾಗಿದೆ. ಚಿಟ್ಟೆ ಇಲ್ಲ ಅಂದ್ರೆ ಭೂಮಿನೆ ಇರಲ್ಲ. ಅದನ್ನ ರೂಪಕವಾಗಿಟ್ಟುಕೊಂಡು ಮಗು ಪ್ರಕೃತಿ ಜೊತೆ ಮಾತಾಡೋದು ಇದೆಯಲ್ಲ ತುಂಬ ಸುಂದರವಾದುದು. ಈಗ ಮನುಷ್ಯ ತನ್ನನ್ನು ತಾನು ಸರ್ವಶ್ರೇಷ್ಠನೆಂದುಕೊಂಡು, ತಾನು ಪಕೃತಿಗಿಂತ ದೊಡ್ಡವನೆಂದುಕೊಂಡು ವರ್ತಿಸುತ್ತಾನೆ. ನಾಟಕದ ರೂಪಕವಾದ ಈ ಚಿಟ್ಟೆ ಪ್ರಕೃತಿಯ ಒಂದು ಭಾಗ. ಅವು ಇಲ್ಲಾಂದ್ರೆ ಭೂಮಿ ಮೇಲೆ ಸಸ್ಯ ಸಂಪತ್ತೇ ಇರೋದಿಲ್ಲ. ಸಸ್ಯ ಸಂಪತ್ತು ಇಲ್ಲಾಂದ್ರೆ ಜನರೂ ಇಲ್ಲ ಜೀವನವೂ ಇಲ್ಲ.ಈ ರೀತಿ ಉತ್ತಮ ಸಂದೇಶವಿರುವ ನಾಟಕಚಿಟ್ಟೆ, ಜೊತೆಗೆ ನಟನ ಎನರ್ಜಿ, ಧ್ವನಿ, ಭಾವಾಭಿನಯ ತುಂಬಾ ಚೆನ್ನಾಗಿದೆ. ಒಂದೂವರೆ ಗಂಟೆ ಅಭಿನಯಿಸಿರುವ ಗೋಕುಲ ಸಹೃದಯನಲ್ಲಿ ಎಂಥ confidence wood son.. good. He can be a very good actor in future. ಚಿಟ್ಟೆಯ ಮೂಲಕ ಸಹೃದಯ ಒಂದು ಹೊಸ ಕಥೆ ಹೇಳುತ್ತಿದ್ದಾನೆ ಎಂದು ಸಿ. ಬಸವಲಿಂಗಯ್ಯ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.