ಕೆ.ವಿ.ಸುಬ್ಬಣ್ಣ ಅವರು ಬರೆದ ಮಕ್ಕಳ ನಾಟಕ-ಜಯಂಟ್ ಮಾಮ. ಆಸ್ಕರ್ ವೈಲ್ಡ್ ಅವರ ‘ದಿ. ಸೆಲ್ಪಿಷ್ ಜಯಂಟ್’’ ಶೀರ್ಷಿಕೆಯ ಕಾಲ್ಪನಿಕ ರಾಕ್ಷಸನ ಕಥೆಯನ್ನು ಪ್ರೇರಣೆಯಾಗಿರಿಸಿಕೊಂಡು ಬರೆದ ನಾಟಕ. ಮಕ್ಕಳ ಕಲ್ಪನಾಶಕ್ತಿ ಶ್ರೀಮಂತವಾದದ್ದು. ಇಂತಹ ಸೃಜನಶೀಲ ಕಾಲ್ಪನಿಕತೆಯನ್ನು ರಂಗಭೂಮಿಯಲ್ಲಿ ತರುವ ಉದ್ದೇಶ ನಾಟಕ ರಚನೆಯ ಹಿಂದಿದೆ. ಕಾಲ್ಪನಿಕತೆ ಎಂದರೆ ವಾಸ್ತವದಿಂದ ಹಿಂದೆ ಸರಿಯುವುದಲ್ಲ. ವಾಸ್ತವಿಕತೆಯಲ್ಲೇ ಕಲ್ಪನೆಗಳನ್ನು ಹೇಗೆ ದುಡಿಸಿಕೊಳ್ಳಬಹುದು ಎಂಬುದಕ್ಕೆ ಈ ನಾಟಕ ಉತ್ತಮ ಮಾದರಿ. ರಾಕ್ಷಸ, ಹನುಮನಾಯಕ, ಚೀಫ್ ಎಂಜಿನಿಯರ್, ಮುದುಕ ಮೇಸ್ಟ್ರು, ಸಿಸ್ಟರ್ ಹಾಗೂ ಪೊಲೀಸರು ಹೀಗೆ ಒಟ್ಟು ಆರು ಪಾತ್ರಗಳ ಮೂಲಕ ಮಕ್ಕಳ ಕಾಲ್ಪನಿಕತೆಯ ಸಿರಿವಂತಿಕೆಯನ್ನು ಹಾಗೂ ವಾಸ್ತವಿಕತೆಯನ್ನು ಎದುರಿಸುವ ಕಲಾತ್ಮಕತೆಯ ಸಂದೇಶ ಈ ನಾಟಕ ನೀಡುತ್ತದೆ.
©2024 Book Brahma Private Limited.