ರಂಗಾಸಕ್ತ ಎ.ಎಸ್. ನದಾಫ್ ಅವರು ಬರೆದ ನಾಟಕಗಳ ಸಂಕಲನ-ಮಕ್ಕಳ ರಂಗ ತೋರಣ. ಮಾತೃ ಹೃದಯ, ನಿಸರ್ಗ ರಹಸ್ಯ, ಗಾಳಿಪಟ ಮತ್ತು ಬಾಲಂಗೋಸಿ ಹೀಗೆ ವಸ್ತು ವೈವಿಧ್ಯತೆಯ ಒಟ್ಟು 12 ಏಕಾಂಕ ನಾಟಕಗಳಿವೆ. ಕೃತಿಗೆ ಮುನ್ನುಡಿ ಬರೆದ ಸಾಹಿತಿ ಬಿ.ಎಂ. ಹರಪನಹಳ್ಳಿ ‘ನಾಟಕಗಳ ಪಾತ್ರಗಳೂ ಕಡಿಮೆ, ಅವಧಿಯೂ ಕಡಿಮೆ, ಪಾತ್ರಗಳ ಸಂಭಾಷಣೆಯಿಂದ ನಾಟಕದ ಮೂಲ ಉದ್ದೇಶವನ್ನು ಪ್ರಕಟಿಸುತ್ತಾ ಸಾಗುವುದು ಇಲ್ಲಿಯ ತಂತ್ರ. ಮಕ್ಕಳ ಸೂಕ್ಷ್ಮ ಮನಸ್ಸಿಗೆ ತಿಳಿಯುವ ಹಾಗೆ ಮತ್ತು ವಿಷಯವಸ್ತುವನ್ನು ಅವರು ಸಂಭ್ರಮಿಸುವ ಹಾಗೆ ಸರಳವಾಗಿ ನಾಟಕಗಳ ವಸ್ತು ನಿರೂಪಿತವಾಗಿದೆ’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.