ಕನ್ನಡ ಮಕ್ಕಳ ನಾಟಕ ಪರಂಪರೆಯಲ್ಲಿ ಪ್ರಮುಖ ಹೆಸರು ಎಂ.ಎನ್. ಕಾಮತ್, ಶಿವರಾಮ ಕಾರಂತ, ಕುವೆಂಪು. ಆದರೂ 1970ರ ದಶಕದಲ್ಲಿ ಬಿ.ವಿ. ಕಾರಂತ, ಎನ್.ಎಸ್. ವೆಂಕಟರಾಮ್ ಅವರ ಪ್ರವೇಶದಿಂದ ಮಕ್ಕಳ ರಂಗಭೂಮಿಗೆ ಹೊಸ ಹುರುಪನ್ನು ಪಡೆಯುವುದರೊಂದಿಗೆ ಹೊಸ ಹೊಸ ಪ್ರಯೋಗಗಳು ನಡೆದವು. ಹೀಗೆ ಮಕ್ಕಳ ನಾಟಕ ಪರಂಪರೆ ನಡೆದು ಬಂದ ದಾರಿ, ಬೇಸಿಗೆ ಶಿಬಿರ, ಕಮ್ಮಟ ವಿಚಾರ ಸಂಕಿರಣ ಮುಂತಾಗಿ ನಡೆದು ಬಂದ ದಾರಿಯ ಅಧ್ಯಯನ ಪೂರ್ವಕ ಲೇಖನ ಸಂಗ್ರಹಗಳ ಕೃತಿ ‘ಮಕ್ಕಳ ರಂಗಭೂಮಿ’. ಗಜಾನನ ಶರ್ಮ ಮತ್ತು ಎಸ್. ವಿ. ಕಶ್ಯಪ್ ಈ ಕೃತಿಯನ್ನು ಸಂಪಾದಿಸಿದ್ದಾರೆ.
©2025 Book Brahma Private Limited.