ಲೇಖಕ ಜಿ.ಎಂ. ಕೃಷ್ಣಮೂರ್ತಿ ಅವರು ಶೇಕ್ಸ್ ಪಿಯರನ ನಾಟಕದ ಸಾರ ಸಂಗ್ರಹ ಕೃತಿ ಅಥೆನ್ಸ್ ನ ಟೈಮನ್. ಶೇಕ್ಸ್ ಪಿಯರ್ ನ ಮಕ್ಕಳ ಕಥಾಲೋಕ ಸರಣಿಯಡಿ ಪ್ರಕಟಿಸಲಾಗಿದೆ. ಮಕ್ಕಳಿಗೆ ತಿಳಿಯುವ ರೀತಿಯಲ್ಲಿ ಇಡೀ ನಾಟಕದ ಸಾರವನ್ನು ಸಂಗ್ರಹಿಸಿ ಬರೆದ ನಾಟಕ ಕೃತಿ ಇದು. ಟೈಮನ್ ಎಂಬ ಅಥೆನ್ಸ್ ನ ಶ್ರೀಮಂತ ವ್ಯಕ್ತಿಯ ಕಥೆ ಇದು. ತನ್ನ ಗೆಳೆಯರೊಂದಿಗೆ ಸೇರಿಕೊಂಡು ದುಂದು ವೆಚ್ಚದಲ್ಲಿ ತೊಡಗಿರುತ್ತಿದ್ದ ಈತನಿಗೆ ಮುಂದೆ ಸಂಪತ್ತು ಕರಗಿ ಹೋಗುತ್ತದೆ. ಆಗ ಗೆಳೆಯರಲ್ಲಿ ನೆರವು ಕೇಳುತ್ತಾನೆ. ಯಾವ ಗೆಳೆಯರು ಮುಂದೆ ಬಂದು ಸಹಾಯ ಮಾಡುವುದಿಲ್ಲ. ಆಗ ಆತನಿಗೆ ಅರಿವು ಆಗುತ್ತದೆ. ಮನುಷ್ಯರ ಬಗ್ಗೆ ಆತನಲ್ಲಿ ದ್ವೇಷ ಹುಟ್ಟುತ್ತದೆ ಮತ್ತು ಎಲ್ಲರಿಂದಲೂ ದೂರ ಇರಲು ಬಯಸುತ್ತಾನೆ ಎಂಬುದು ಈ ನಾಟಕದ ವಸ್ತು. ಈ ನಾಟಕದಲ್ಲಿ ಬದುಕಿನ ವಿವಿಧ ಆಯಾಮಗಳನ್ನು ತಿಳಿಯಪಡಿಸಲಾಗಿದೆ. ಮಕ್ಕಳು ಮಾತ್ರವಲ್ಲ; ದೊಡ್ಡವರಿಗೂ ಈ ನಾಟಕದಲ್ಲಿ ಸಂದೇಶವಿದೆ.
©2025 Book Brahma Private Limited.