ಪ್ರಾಚೀನ ಮತ್ತು ಸಮಕಾಲೀನಗಳ ನಡುವೆ ನಡೆಯುವ ಈ ವಿನಿಮಯವು ಕಾವ್ಯವನ್ನು ಅಲೌಕಿಕವನ್ನಾಗಿ ಮಾಡುತ್ತದೆ. ಊರಗೌಡನ ಕಿರಿಯಸೊಸೆಯು ತನ್ನನ್ನು ಬಲಿಯಾಗಿ ಅರ್ಪಣೆ ಮಾಡಿಕೊಂಡು ಕೆರೆಯಲ್ಲಿ ನೀರು ಬರುವಂತೆ ಮಾಡುತ್ತಾಳೆ, ಕನ್ನಡ ಕಾವ್ಯವು ಈ ಬಲಿದಾನವನ್ನು ಕೊಂಡಾಡುತ್ತದೆ. ಯಾವುದೇ ಒಂದು ಹಳ್ಳಿಯಲ್ಲಿ ಪ್ರತಿಯೊಂದು ಮನೆಯೂ ಹಲವು ಕತೆಗಳ ಉಗ್ರಾಣವಾಗಿರುತ್ತದೆ. ಮನೆಗಳು, ಬಾವಿ ಗದ್ದೆ ದೇವಾಲಯಗಳು ಮರಗಳು ಎಲ್ಲವನ್ನೂ ಕತೆಗಳು ಬೇಟೆಯಾಡಿವೆ. ಸ್ಥಳೀಯ ದೇವರುಗಳು ಹಟ್ಟಿಯ ಸುಂದರಿಯರನ್ನು ಮದುವೆಯಾಗುತ್ತಾರೆ. ಅಲೌಕಿಕವಾದದ್ದು ಸಹಜತೆಯೊಳಗೆ ಲೀನವಾಗಿ ಬಿಡುತ್ತದೆ. ವೈಷ್ಣವರ ಸುಪ್ರಸಿದ್ಧ ರಂಗನಾಥ ದೇವರು ಸೋಲಿಗ ಬುಡಕಟ್ಟಿನ ಅಳಿಯನಾಗುತ್ತಾನೆ. ಸ್ಥಳೀಯವಾದ ಘಟನೆ, ವಸ್ತುವನ್ನುಳ್ಳ ಕಾವ್ಯವು ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೇರಿದ್ದು ಎನ್ನುವದು ನಿಜ. ದೇವರ ಈ ಮದುವೆಯು ಒಂದು ಐತಿಹಾಸಿಕ ಘಟನೆಯಲ್ಲ. ಅದು ಒಂದು ನಿರ್ದಿಷ್ಟ ಸ್ಥಳದ ಜನರಿಗೆ ಸಂಬಂಧಪಟ್ಟದ್ದು ಎಂದು ಲೇಖಕರ ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.