ಆರ್.ಕೆ.ಶಾನಭೋಗ ಅವರು ಬರೆದ ಮೊದಲ ಮಕ್ಕಳ ನಾಟಕ-ಪಾರಿತೋಷ. ಧಾರವಾಡದ ಆಕಾಶವಾಣಿಯಿಂದ ಬಿತ್ತರವಾಗಿದೆ. ಮಕ್ಕಳ ಸಾಹಿತ್ಯದಲ್ಲಿ ಕೃಷಿಯಾಗಿರುವುದು ಕಡಿಮೆ. ಅದರಲ್ಲೂ ಮಕ್ಕಳ ನಾಟಕ ವಿಷಯದಲ್ಲಂತೂ ತೀರಾ ವಿರಳ. ಮಕ್ಕಳಿಗಾಗಿಯೇ‘ಅಪೂರ್ವ’ ನಾಟಕ ಬರೆದೆ. ಅದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿತ್ತು. ಈಗ ಮತ್ತೇ ಪಾರಿತೋಷ ಎಂಬ ಮಕ್ಕಳ ನಾಟಕ ಅದೂ ಪ್ರದರ್ಶಿಸಲು ಯೋಗ್ಯವಾಗುವಂತೆ ಬರೆಯಲಾಗಿದೆ. ಎ. ತೋಲಸ್ತೋಯ್ ಹೇಳಿದ ಒಂದು ರಷ್ಯನ್ ಜಾನಪದ ಕಥೆ-‘ತಿರ್‍ಯೋಷಚ್ಕ’ ಇದನ್ನು ಆಧರಿಸಿ ಪಾರಿತೋಷ ನಾಟಕ ಬರೆದಿದೆ ಎಂದು ಲೇಖಕರು ಹೇಳಿದ್ದಾರೆ.
©2025 Book Brahma Private Limited.