ಬೆಟ್ಟಕ್ಕೆ ಚಳಿಯಾದರೆ-ಕೆ.ವಿ.ಸುಬ್ಬಣ್ಣಅವರು ಕೆ.ವಿ.ಅಕ್ಷರ ಜೊತೆಗೂಡಿ ಬರೆದ ಮಕ್ಕಳ ನಾಟಕ. ಪಿ.ಎಸ್.ರಾಮಪ್ಪ ಅವರು ವಿಜಯ ತೆಂಡೂಲ್ಕರ್ ಬರೆದ ಮಕ್ಕಳ ನಾಟಕವನ್ನು ಅನುವಾದಿಸಿದ್ದು, ಅಲ್ಲಿಯ ಪರಿಕರಗಳನ್ನು ಬಳಸಿ, ಬೇರೆ ರೀತಿಯ ನಾಟಕ ರಚಿಸಬಹುದೆಂಬ ವಿಚಾರವೇ ಈ ಕೃತಿ ರಚನೆಗೆ ಕಾರಣ ಎಂದು ನಾಟಕಕಾರರು ಹೇಳಿದ್ದಾರೆ.
ಸನಾತನ ಧರ್ಮಸಂಸ್ಥೆಯ ಸದಸ್ಯರ ಗುಂಪು ಹಾಗೂ ಪವಾಡ ವಿರೋಧಿ ಸದಸ್ಯರ ಗುಂಪುಗಳು ತಮ್ಮ ತಮ್ಮ ವಿಚಾರಗಳನ್ನು ಸಮರ್ಥಿಸಿಕೊಳ್ಳುತ್ತಲೇ ಈ ನಾಟಕ ಸನಾತನ ಹಾಗೂ ವೈಜ್ಞಾನಿಕತೆಯ ಮಧ್ಯೆ ನಡೆಯುತ್ತಾ ಬಂದ ಸಂಘರ್ಷದ ಪರಿಯನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.
©2024 Book Brahma Private Limited.