ಲೇಖಕ ರವಿರಾಜ್ ಸಾಗರ್ ಅವರ ಮಕ್ಕಳ ನಾಟಕಗಳ ಸಂಕಲನ ಕೃತಿ ʻಕಲಿತವರು ಮತ್ತು ಇತರೆ ಮಕ್ಕಳ ನಾಟಕಗಳುʼ. ಪ್ರಸ್ತುತ ಪುಸ್ತಕದಲ್ಲಿ ಮಕ್ಕಳ ಮನೋಲೋಕದ ತಲ್ಲಣಗಳನ್ನು ಸಮರ್ಥವಾಗಿ ಚಿತ್ರಿಸಲಾಗಿದೆ. ಇಂದಿನ ಮಕ್ಕಳು ಸಮಾಜಕ್ಕೆ ಎಸೆವ ಸವಾಲಿನಂತೆ ಕಾಣುವುದು ಸೋಜಿಗ ಆದರೂ ಸತ್ಯ. ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಂಕಗಳು ಎನ್ನುವ ಭೂತ ಮಕ್ಕಳನ್ನು ಪೀಡಿಸುತ್ತಿದು, ಆ ಕುರಿತಾಗಿ ಲೇಖಕರು ನಾಟಕವನ್ನು ರಚಿಸಿದ್ದಾರೆ. ಈ ಮೂಲಕ ಮಕ್ಕಳ ಮನದಾಳದ ಮಾತುಗಳನ್ನು ನಾಟಕವಾಗಿಸಿರುವುದು ವಿಶೇಷ.
©2025 Book Brahma Private Limited.