ಮಹಿಳೆಯರಿಗೆ ಉನ್ನತ ಶಿಕ್ಷಣ ಮತ್ತು ತರಬೇತಿ ನೀಡುವ ಮೂಲಕ ಮಹಿಳಾ ಸಬಲೀಕರಣ ಸಾಧಿಸುವ ಉದ್ದೇಶದಿಂದ ೨೦೦೩ರಲ್ಲಿ ಆರಂಭವಾದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವಾಗಿದೆ. ಸಂಕೀರ್ಣ ಸಂಕಲನಗಳು ಯೋಜನೆಯಲ್ಲಿ ಮಹಿಳೆಯರ ಉತ್ತಮ ಅಭಿವ್ಯಕ್ತಿಗಳಾದ ಕಾವ್ಯ, ನಾಟಕ, ಸಣ್ಣಕತೆ, ವಿಮರ್ಶೆ, ಸಂಶೋಧನೆ ಮತ್ತು ಲಲಿತ ಪ್ರಬಂಧ ಎಂಬ ಆರು ಸಂಕಲಿತ ಕೃತಿಗಳನ್ನು ಹೊರತರಲಾಗಿದೆ. ಇದಲ್ಲದೆ ವಿಜಾಪುರದ ಸೂಫಿಸಂತರು ಹಾಗೂ ವಿಜಾಪುರದ ಕಲೆ ಮತ್ತು ವಾಸ್ತುಶಿಲ್ಪ ಎಂಬ ಎರಡು ಅನುವಾದಿತ ಕೃತಿಗಳು ಮತ್ತು ಮಹಿಳಾ ಪ್ರಚಲಿತ ವಿಷಯಗಳು ಹಾಗೆ ವಿವಿಧ ಲೇಖಕರಿಂದ ಮೂಡಿಬಂದ ಬರಹಗಳ ಸಂಕಲನ ಸಂಕಿರ್ಣ ಒಟ್ಟು ಹತ್ತು ಸಂಪುಟಗಳನ್ನು ಹೊರ ತಂದಿದ್ದಾರೆ.
©2024 Book Brahma Private Limited.