ಸಾಂಸ್ಥಿಕಪ್ರಜ್ಞೆ ಡಾ.ಎಂ.ಎಂ.ಕಲಬುರ್ಗಿ

Author : ಎಂ.ಎಸ್. ಮದಭಾವಿ

Pages 1

₹ 1.00




Year of Publication: 2015
Published by: 1
Address: ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರ, ಬಿ.ಎಲ್.ಡಿ.ಇ. ಸಂಸ್ಥೆ-ವಿಜಯಪುರ

Synopsys

ಹಲವು ಸಂಘಟನೆಗಳು, ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು ಕಲಬುರ್ಗಿ. ಅವರು ರೂಪಿಸಿದ ಯೋಜನೆಗಳು ಕೂಡ ಹಲವು. ಅವರು ಮುನ್ನಡೆಸಿದ ಸರ್ಕಾರಿ ಸಂಸ್ಥೆಗಳಿಗೂ ಲೆಕ್ಕವಿಲ್ಲ. ವಿಜಯಪುರದ ಡಾ.ಫಗು.ಹಳಕಟ್ಟಿ ಸಂಶೋಧನಾ ಕೇಂದ್ರ, ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌, ಕನ್ನಡ ವಿಶ್ವವಿದ್ಯಾಲಯ ಹಂಪಿ, ಬಸವ ಸಮಿತಿ ಬೆಂಗಳೂರು, ಬಾಲ್ಕಿ ಹಿರೇಮಠ ಸಂಸ್ಥಾನಮಠ ಹೀಗೆ ನೂರೆಂಟು ಸಂಸ್ಥೆಗಳು ಅವರ ಕೊಡುಗೆಯನ್ನು ಸದಾ ನೆನೆಯುತ್ತಲೇ ಇರುತ್ತವೆ.

ಹಾಗೆ ಅವರು ಸಂಘ ಸಂಸ್ಥೆಗಳಿಗೆ ಬೆನ್ನೆಲುಬಾಗಿ ನಿಂತಿದ್ದನ್ನು ಒಂದೊಂದಾಗಿ ಪಟ್ಟಿ ಮಾಡಿ ಕೃತಿಯಲ್ಲಿ ನೀಡಲಾಗಿದೆ. ಪುಸ್ತಕದ ಲೇಖಕರು ಡಾ. ಎಂ.ಎಸ್. ಮದಭಾವಿ.

About the Author

ಎಂ.ಎಸ್. ಮದಭಾವಿ
(01 January 0951)

ಡಾ. ಎಂ.ಎಸ್‌.ಮದಭಾವಿ ಅವರು ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿ ಗ್ರಾಮದವರು. ಕನಾಟಕ ವಿ.ವಿ.ಯಿಂದ ಎಂ.ಎ (1975) ಹಾಗೂ ಬಬಲಾದಿ ಚಿಕ್ಕಯ್ಯ ಸ್ವಾಮಿಗಳ ಜೀವನ ಹಾಗೂ ಕೃತಿ ಸಮೀಕ್ಷೆ (1997) ಕವಿವಿಗೆ ಮಹಾಪ್ರಬಂಧ ಸಲ್ಲಿಸಿ, ಪಿಎಚ್ ಡಿ ಪಡೆದರು. ಬಿಎಲ್ ಡಿಇ ಸಂಸ್ಥೆಯಲ್ಲಿ ಕನ್ನಡ ಉಪನ್ಯಾಸಕರಾಗಿ ನಿವೃತ್ತರಾದರು. ಸದ್ಯ, ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿಯಾಗಿದ್ದಾರೆ.  ಕೃತಿಗಳು ಮತ್ತು ಸಂಪಾದನೆ: ಫ.ಗು.ಹಳಕಟ್ಟಿ ಚರಿತ್ರೆ ಸಾಹಿತ್ಯ (ಸಂ), ಬಬಲಾದಿ ಚಿಕ್ಕಯ್ಯ ಸ್ವಾಮಿಗಳ ಕಾಲಜ್ಞಾನ ಪದಗಳು (ಸಂ), ಮಧುರ ಚೆನ್ನರ ಜನ್ಮ ಶತಮಾನೋತ್ಸವ ಸ್ಮರಣ ಸಂಚಿಕೆ (ಸಂ), ಕಂಚ್ಯಾಣಿ ಶರಣಪ್ಪನವರ ಅಭಿನಂದನಾ ಗ್ರಂಥ ...

READ MORE

Related Books