ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸ ದಾರಿ ತೋರಿದವರು ಎಸ್.ವಿ.ರಂಗಣ್ಣ. ಕುಮಾರವ್ಯಾಸ ಕಿರುಹೊತ್ತಗೆ. ರುಚಿ, ವಿಡಂಬನೆ, ಶೈಲಿ ಪ್ರಾರಂಭದ ಕೃತಿಗಳು. ಶೈಲಿ ಕೃತಿಯು ಇವರಿಗೆ ಅಪಾರ ಕೀರ್ತಿ ತಂದಿತು. ಪಂಪ, ರನ್ನ, ಜನ್ನ, ನಾಗಚಂದ್ರ, ಹರಿಹರ, ಲಕ್ಷ್ಮೀಶ ಮುಂತಾದ ಅನೇಕ ಕವಿಗಳ ಶೈಲಿಯನ್ನು ‘ಶೈಲಿ’ ಕೃತಿಯಲ್ಲಿ ಚರ್ಚಿಸಿದ್ದಾರೆ. ವಿಮರ್ಶಾ ಸಂಕಲನ-ಹೊನ್ನಶೂಲ 1969ರಲ್ಲಿ ಪ್ರಕಟಿತ. ಕಾಳಿದಾಸನ ‘ನಾಟಕ ವಿಮರ್ಶೆ’ ಮತ್ತೊಂದು ಪ್ರಮುಖ ಕೃತಿ. ಪಾತ್ರಚಿತ್ರಣ, ಸಂವಿಧಾನ, ನಾಟಕೀಯತೆ ಕಥಾವಸ್ತುಗಳ ದೀರ್ಘಚರ್ಚೆ. ದೀರ್ಘ ವ್ಯಾಸಂಗ ಹಾಗೂ ಪರಿಶ್ರಮದಿಂದ ರಚಿಸಿದ ಮತ್ತೊಂದು ಮಹೋನ್ನತ ಕೃತಿ “ಪಾಶ್ಚಾತ್ಯ ಗಂಭೀರ ನಾಟಕಗಳು”. ರಂಗಬಿನ್ನಪ ಮುಕ್ತಕಗಳ ಸೃಜನಾತ್ಮಕ ಕೃತಿ. ಇನ್ನೆರಡು ಕೃತಿ ನಾಟುನುಡಿ. ಕವಿಕಥಾಮೃತ-ವಿದೇಶಿ ಬರಹಗಾರರ ಬದುಕಿನ ರೋಚಕ ಘಟನೆಗಳ ಸರಮಾಲೆ. ಇಂಗ್ಲಿಷ್ ಕೃತಿಗಳು-KNOTS AND KNOTTING, THE LADY AND THE RING, OLD TALE RETOLD, B.M. SRIKANTAIAH : A PROFILE. ಸಂದ ಗೌರವ ಪ್ರಶಸ್ತಿಗಳು-ಸ್ಕೌಟ್ ಚಳವಳಿಯಲ್ಲಿ ತೊಡಗಿಸಿಕೊಂಡದ್ದಕ್ಕೆ ರಜತಗಜ ಪ್ರಶಸ್ತಿ, ರಂಗಬಿನ್ನಪ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, 1970ರಲ್ಲಿ ಮೈಸೂರು ವಿ.ವಿ.ದಿಂದ ಗೌರವ ಡಿ.ಲಿಟ್ ಪದವಿ. 1976ರಲ್ಲಿ ಶಿವಮೊಗ್ಗೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥ ‘ಬಾಗಿನ’. ಈ ವಿಮರ್ಶಕರ ಬಗ್ಗೆ ಸಿ.ಪಿ.ಕೆ ಅವರು ಬರೆದಿದ್ದಾರೆ.
©2024 Book Brahma Private Limited.