ರಂ.ಶ್ರೀ. ಮುಗಳಿ

Author : ತಾಳ್ತಜೆ ವಸಂತಕುಮಾರ

Pages 112

₹ 60.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805 / 080 - 20161913

Synopsys

ರಂ.ಶ್ರೀ. ಮುಗಳಿಯವರು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರಾದ ಎರಡನೆಯ ಕನ್ನಡಿಗರು. ಮುಗಳಿಯವರು ರಚಿಸಿದ ’ಕನ್ನಡ ಸಾಹಿತ್ಯ ಚರಿತ್ರೆ’ ಕನ್ನಡ ಸಾಹಿತ್ಯ ಲೋಕದಲ್ಲೊಂದು ಮೈಲುಗಲ್ಲು. ವೈಜ್ಞಾನಿಕವಾದ, ವ್ಯವಸ್ಥಿತವಾದ, ಆಧಾರಪೂರ್ವಕವಾದ ಹಾಗೂ ವಸ್ತು ನಿಷ್ಟವಾದ ಮೊಟ್ಟಮೊದಲ ಸಾಹಿತ್ಯ ಚರಿತ್ರೆಯನ್ನು ಕನ್ನಡಕ್ಕೆ ನೀಡಿದ್ದು ಅವರ ಜೀವಮಾನದ ಸಾಧನೆಯಾಗಿದೆ. ಕವಿಯಾಗಿ, ನಾಟಕಕಾರರಾಗಿ, ಕಾದಂಬರಿಕಾರರಾಗಿ, ಸಂಪಾದಕರಾಗಿ ಅವರು ನೀಡಿರುವ ಕಾಣಿಕೆಯೂ ಮಹತ್ವವಾದದ್ದು. ಮುಗಳಿಯವರು 1956ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಮ್ಮ"ಕನ್ನಡ ಸಾಹಿತ್ಯ ಚರಿತ್ರೆ" ಕೃತಿಗೆ ಪಡೆದರು.

ಇದು ರಂ.ಶ್ರೀ. ಮುಗಳಿಯವರ ಬದುಕು ಮತ್ತು ಬರಹವನ್ನು ಪರಿಚಯಿಸುವ ಕೃತಿಯಾಗಿದ್ದು, ಡಾ. ತಾಳ್ತಜೆ ವಂಸತಕುಮಾರ ಕೃತಿಯನ್ನು ಬರೆದಿದ್ದಾರೆ. 

About the Author

ತಾಳ್ತಜೆ ವಸಂತಕುಮಾರ
(27 December 1948)

ನಿವೃತ್ತ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ತಾಳ್ತಜೆ ವಸಂತಕುಮಾರ ವಿಮರ್ಶೆ ಹಾಗೂ ಸಾಂಸ್ಕೃತಿಕ ಸಂಶೋಧನೆಯಲ್ಲಿ ಗಣನೀಯ ಕೆಲಸ ಮಾಡಿದ್ದಾರೆ. ಈಗಿನ ಕೇರಳದ ಕಾಸರಗೋಡಿನ ತಾಳ್ತಜೆಯವರಾದ ಅವರು ಜನಿಸಿದ್ದು 1948 ಡಿಸೆಂಬರ 27ರಂದು. ಸ್ನಾತಕೋತ್ತರ ಪದವಿ (ಎಂಎ ಕನ್ನಡ) ಪಡೆದಿರುವ ಅವರು ಸಿದ್ಧಪಡಿಸಿದ ’ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ’ ಮಹಾಪ್ರಬಂಧಕ್ಕೆ ಪಿಎಚ್‌.ಡಿ. ಪದವಿ ದೊರೆತಿದೆ. ಸದ್ಯ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ವಾಸಿಸುತ್ತಿದ್ದಾರೆ. ಹರಿಹರನ ರಗಳೆಗಳು, ಸಿಂಗಾರ, ಆಯ್ದ ಲೇಖನಗಳು (ವಿಮರ್ಶೆ), ದಾಸಸಾಹಿತ್ಯ, ಹಣತೆಗೆ ಹನಿ ಎಣ್ಣೆ (ಸಾಂಸ್ಕೃತಿಕ ಸಂಶೋಧನೆ), ವಿ.ಕೃ. ಗೋಕಾಕ, ರಂ.ಶ್ರೀ. ಮುಗಳಿ, ಶಿವರಾಮ ಕಾರಂತ (ಜೀವನ ...

READ MORE

Related Books