ರಾ.ಶಿ.(ರಾಮಸ್ವಾಮಯ್ಯ ಶಿವರಾಂ) ಅವರು ಕನ್ನಡದ ವಿಶಿಷ್ಟ ಲೇಖಕರು. ವೈದ್ಯರೊಬ್ಬರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು, ವೃತ್ತಿಯಂತೆ ಪ್ರವೃತ್ತಿಯಲ್ಲೂ ಅನನ್ಯ ಸಾಧನೆ ಮಾಡಿದವರು. ಜ್ಞಾನದಾಹ, ಸಾಹಿತ್ಯಕ ಅಭೀಪ್ಸೆ ಮತ್ತು ಜೀವನೋತ್ಸಾಹಗಳ ಸಂಗಮವೇ ಅವರಾಗಿದ್ದರು. ‘ಕೊರವಂಜಿ‘ ಯ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ನಗುವನ್ನು ಅರಳಿಸಿದ ಮಾಂತ್ರಿಕರೂ ರಾ.ಶಿ. ತಮ್ಮ ಬಹುಮುಖೀ ಸಾಧನೆಗಳಿಂದ ಅವರು ಕನ್ನಡ ಸಾಹಿತ್ಯ ಲೋಕದ ಮರೆಯಲಾಗದ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ರಾಶಿ ಅವರು ತಮ್ಮ ’ಮನಮಂಥನ’ ಕೃತಿಗಾಗಿ 1976ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿದ್ದಾರೆ.
ರಾ.ಶಿ ಅವರ ಜೀವನ ಮತ್ತು ಸಾಧನೆಯನ್ನು ಪರಿಚಯಿಸುವ ಕೃತಿಯನ್ನು ರಚಿಸಿದವರು, ಅವರ ಕುರಿತು ತಲಸ್ಪರ್ಶಿ ಅಧ್ಯಯನ ನಡೆಸಿರುವ, ಸೃಜನಶೀಲ ಸಾಹಿತಿಗಳೂ, ಇತಿಹಾಸ ವಿದ್ವಾಂಸರೂ ಆಗಿರುವ ಎಚ್.ಎಸ್. ಗೋಪಾಲ ರಾವ್.
©2024 Book Brahma Private Limited.