”ಎಂ ಎಂ ಕಲಬುರ್ಗಿ’ ಸಿದ್ದನಗೌಡ ಪಾಟೀಲ ಅವರ ಕೃತಿಯಾಗಿದೆ. ಅವರ ವೈಚಾರಿಕ ವಿಶ್ಲೇಷಣೆ ಎಷ್ಟು ಆಳವೂ, ವಿಶಾಲವೂ, ಸಮರ್ಪಕವೂ ಆಗಿದೆ ಎಂಬುದಕ್ಕೆ 'ಚಿಂತಕ-ಹಂತಕ ಪರಂಪರೆ' ಎಂಬ ಮೊದಲ ಅಧ್ಯಾಯವೇ ಸಾಕ್ಷಿಯಾಗಿದೆ. 'ಕರಿಯನ್ನು ಕನ್ನಡಿಯಲ್ಲಿ ತೋರಿಸಿದಂತೆ', ಕಲಬುರ್ಗಿ ಅವರ ಅಗಾಧ ಸಾಹಿತ್ಯದ ವೈದುಷ್ಯ ಸಾಧನೆಗಳನ್ನು ಅತ್ಯಂತ ಸಮರ್ಥವಾಗಿ, ಯಶಸ್ವಿಯಾಗಿ ತೆರೆದು ತೋರಿದ್ದಾರೆ. ನಾನೇ ಈ ಗ್ರಂಥವನ್ನು ರಚಿಸಿದ್ದರೂ, ಇಷ್ಟು ಪರಿಣಾಮಕಾರಿಯಾಗಿ ಅರ್ಥಪೂರ್ಣವಾಗಿ ರಚಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಮಾಲೆಯಲ್ಲಿನ ಉತ್ಕೃಷ್ಟ ಕೃತಿಗಳಲ್ಲಿ ಇದು ಒಂದಾಗಿ ನಿಲ್ಲುತ್ತದೆಂದು ನಂಬಿದ್ದೇನೆ. ಇಂಥ ಕೃತಿ ರಚನೆಯಿಂದ ಈ ಮಾಲೆಯ ಗೌರವವನ್ನು ಹೆಚ್ಚಿಸಿರುವುದಕ್ಕಾಗಿ ಶ್ರೀ ಪಾಟೀಲರನ್ನು ಹೃತೂರ್ವಕವಾಗಿ ಅಭಿನಂದಿಸಬಯಸುತ್ತೇನೆ. ಎಂದು ಪುಸ್ತಕದ ಮುನ್ನುಡಿಯಲ್ಲಿ ಪ್ರಧಾನ್ ಗುರುದತ್ತ್ ತಿಳಿಸಿದ್ದಾರೆ.
©2024 Book Brahma Private Limited.