ಮರಾಠಿ ಕಲಬುರ್ಗಿ

Author : ಸರಜೂ ಕಾಟ್ಕರ್‌

Pages 200




Year of Publication: 2016
Published by: ಲಿಂಗಾಯತ ಅಧ್ಯಯನ ಸಂಸ್ಥೆ
Address: ಲಿಂಗಾಯತ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಠಾನಮಠ, ಎಡೆಯೂರು- ಡಂಬಳ, ಗದಗ

Synopsys

ಕಲಬುರ್ಗಿ ಅವರ ಹತ್ಯೆಯನ್ನು ಖಂಡಿಸಿ ಮರಾಠಿ ಪತ್ರಿಕೆಗಳು, ಲೇಖಕರು ಅನೇಕ ಪ್ರತಿಕ್ರಿಯೆಗಳನ್ನು ನೀಡಿದರು. ಗಡಿಯಾಚೆಗೂ ಕಲಬುರ್ಗಿ ಅವರಿಗೆ ಇದ್ದ ಸಾಂಸ್ಕೃತಿಕ ನಂಟನ್ನು ಇದು ಬಿಂಬಿಸುತ್ತದೆ. ಮರಾಠಿ ಮತ್ತು ಕನ್ನಡದಲ್ಲಿ ನುರಿತಿರುವ ಪತ್ರಕರ್ತ ಚಿಂತಕ ಡಾ. ಸರಜೂ ಕಾಟ್ಕರ್‌ ಮರಾಠಿಯ ಕೆಲವು ಮುಖ್ಯ ಲೇಖನಗಳನ್ನ, ಪತ್ರಿಕಾ ವರದಿಗಳನ್ನು ಕನ್ನಡೀಕರಿಸಿ ’ಮರಾಠಿ ಕಲಬುರ್ಗಿ’ ಗ್ರಂಥದಲ್ಲಿ ನೀಡಿದ್ದಾರೆ.  ಪತ್ರಬರಹಗಳು ಹಾಗೂ ಕಾಟ್ಕರ್‌ ಅವರೇ ಬರೆದ ನೀಳ್ಗವಿತೆಯೊಂದು ಕೃತಿಯಲ್ಲಿದೆ.

About the Author

ಸರಜೂ ಕಾಟ್ಕರ್‌
(14 August 1953)

ವೃತ್ತಿಯಲ್ಲಿ ಪತ್ರಕರ್ತರು ಆಗಿರುವ ಕವಿ ಸರಜೂ ಕಾಟ್ಕರ್ ಅವರು ಜನಿಸಿದ್ದು (1953 ಆಗಸ್ಟ್‌ 14ರಂದು) ಹುಬ್ಬಳ್ಳಿಯಲ್ಲಿ . ತಂದೆ ಹಣಮಂತರಾವ್, ತಾಯಿ ಗೌರಾಬಾಯಿ.  ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ (ಕನ್ನಡ) ಪದವೀಧರರು.ಕರ್ನಾಟಕ ವಿ.ವಿ.ಯಿಂದ ‘ಕನ್ನಡ-ಮರಾಠಿ ದಲಿತ ಸಾಹಿತ್ಯ: ಒಂದು ಅಧ್ಯಯನ’ ವಿಷಯವಾಗಿ (1994) ಪಿಎಚ್ ಡಿ ಪಡೆದರು. ಸಂಯುಕ್ತ ಕರ್ನಾಟಕದಲ್ಲಿ ವರದಿಗಾರರಾಗಿ ವೃತ್ತಿ ಆರಂಭಿಸಿ, ನಂತರ ಇಂಡಿಯನ್‌ ಎಕ್ಸ್‌ಪ್ರೆಸ್‌ ಬಳಗದ ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರು ಸೇರಿದಂತೆ ಸರ್ಕಾರದ ಹಲವಾರು ಅಕಾಡೆಮಿ, ಸಮಿತಿ ಹೀಗೆ ವಿವಿಧ ಜವಾಬ್ದಾರಿತ ಸ್ಥಾನಗಳನ್ನು ನಿರ್ವಹಿಸಿದ್ದಾರೆ.  ಕೃತಿಗಳು: ಬೆಂಕಿ-ನೀರು, ಹಸಿದ ನೆಲ, ಸೂರ್ಯ, ...

READ MORE

Related Books