ಈ ಗ್ರಂಥದಲ್ಲಿ ಮಹಿಳೆಯರ ಕೌಟುಂಬಿಕ, ಸಾಮಾಜಿಕ, ಸಾಮುದಾಯಿಕ ಬದುಕಿನ ಒಳಗೆ ಹೆಡೆ ಬಿಚ್ಚುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಹಾಗೂ ಅವುಗಳಿಗೆ ಕಾರಣವಾಗುವ ಮೂಲಾಂಶಗಳನ್ನು ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸರಳವಾಗಿ ವಿವರಿಸಲಾಗಿದೆ. ಸ್ತ್ರೀಯರ ಆರೋಗ್ಯಕ್ಕೆ ಸಂಬಂಧಿಸಿ ಹುಟ್ಟಿಕೊಂಡಿರುವ ಹಾಗು ಹಬ್ಬಿಕೊಂಡಿರುವ ಮೂಢ ಸಂಗತಿಗಳನ್ನು ಪ್ರಶ್ನಿಸುವ, ವಿಮರ್ಶಿಸುವ ಹಾಗೂ ಅವುಗಳ ಸತ್ಯಾಸತ್ಯತೆಗಳನ್ನು ಈ ಕೃತಿಯಲ್ಲಿ ಗುರುತಿಸಲಾಗಿದೆ. ಈ ಗ್ರಂಥವು ಹೊಂದಿರುವ ಅಧ್ಯಾಯಗಳೆಂದರೆ: ಜನಸಂಖ್ಯಾ ಅಂಕಿಅಂಶಗಳಲ್ಲಿರುವ ಮಹಿಳಾ ಆರೋಗ್ಯ ಸೂಚಕಗಳು ,ಇಳಿಯುತ್ತಲೇ ಇರುವ ಭಾರತೀಯ ಸ್ತ್ರೀ ಸಂಖ್ಯೆ ,ಆಹಾರ ಪೋಷಣೆ ಮತ್ತು ಮಹಿಳಾ ಆರೋಗ್ಯ ,ಮಹಿಳೆ ಮತ್ತು ಆರೋಗ್ಯ ಸೇವಾ ಸೌಲಭ್ಯಗಳು ,ಭಾರತದ ರಾಷ್ಟ್ರೀಯ ಜನಸಂಖ್ಯಾ ನೀತಿ ಮತ್ತು ಸಂತಾನ ನಿರೋಧಕ ,ಪ್ರಜನನ ಆರೋಗ್ಯ ,ವಿಶ್ವ ಮಹಿಳಾ ಆರೋಗ್ಯ ಚಳುವಳಿಯ ಕಾಳಜಿಗಳು.
©2024 Book Brahma Private Limited.