ಕನ್ನಡದ ಉತ್ತಮ ವಿಮರ್ಶಕರಲ್ಲಿ ಒಬ್ಬರಾಗಿದ್ದ ಪ್ರೊ. ಎಲ್.ಎಸ್. ಶೇಷಗಿರಿರಾವ್ ಆಂಗ್ಲಭಾಷೆಯ ಮೇಲೆ ಉತ್ತಮ ಹಿಡಿತ ಹೊಂದಿದ್ದವರು. ಹತ್ತೊಂಬತ್ತನೇ ವಯಸ್ಸಿಗೆ ಪ್ರಾಧ್ಯಾಪಕರಾದ ರಾಯರು ನಂತರ ಹಲವು ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲ ಅಧ್ಯಕ್ಷರು ಕೂಡ. ಉಡುಪಿಯಲ್ಲಿ ನಡೆದ 74ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು.
’ಫ್ರಾನ್ಸ್ ಕಾಫ್ಕ’, ’ಗ್ರೀಕ್ ರಂಗಭೂಮಿ ಮತ್ತು ನಾಟಕ’, ’ಇಂಗ್ಲೀಷ್ ಸಾಹಿತ್ಯ ಚರಿತ್ರೆ’, ’ಟಿ.ಪಿ. ಕೈಲಾಸಂ’ ಇವರ ಕೆಲವು ಪ್ರಮುಖ ಕೃತಿಗಳು. ನಿಘಂಟು ತಜ್ಞರೂ ಆಗಿದ್ದ ಅವರು ವಿವಿಧ ಪ್ರಕಾಶನಗಳಿಗೆ ನಿಘಂಟಗಳನ್ನು ರಚಿಸಿಕೊಟ್ಟಿದ್ದಾರೆ.
ಇವರ ಜೀವನ ಸಾಧನೆಗಳನ್ನು ಕೃತಿಯಲ್ಲಿ ವಿವರಿಸಲಾಗಿದೆ.
©2024 Book Brahma Private Limited.