ನ್ಯಾಯಪ್ರಜ್ಞೆಯ ಮೂರ್ತಿ ಎಂದು ಪರಿಗಣಿಸಲ್ಪಟ್ಟಿದ್ದ ಶ್ರೀ ಎಂ.ಸಿ.ಸೆಟಲ್ವಾಡ್ರವರು ಭಾರತೀಯ ವಿದ್ಯಾಭವನದಲ್ಲಿ ಆಶ್ರಯದಲ್ಲಿ ನೀಡಿದ ಮೂರು ಉಪನ್ಯಾಸಗಳು ಪುಸ್ತಕ ರೂಪವಾಗಿ ಹೊರಹೊಮ್ಮಿದೆ. ಈ ಉಪನ್ಯಾಸಗಳಲ್ಲಿ ಅವರು ಸಂಸ್ಕೃತಿ ಮತ್ತು ಕಾನೂನು ನಡುವಣ ಆಂತರಿಕ ಸಂಬಂಧವನ್ನು, ಪ್ರಾಚೀನ ಹಾಗೂ ಆಧುನಿಕ ಭಾರತದಲ್ಲಿ ಕಾನೂನು ಮತ್ತು ಸಂಸ್ಕೃತಿಯನ್ನು ವಿವರಿಸಿದ್ದಾರೆ. ಕಾನೂನುಗಳನ್ನು ರಚಿಸುವಲ್ಲಿ ವಿವಿಧ ಧರ್ಮಗಳು, ಬೇರೆಬೇರೆ ರೀತಿಯ ಸರಕಾರಗಳು ಹೇಗೆ ವರ್ತಿಸುತ್ತವೆ, ಹಿಂದೂ ಸಂಸ್ಕೃತಿಗಳು ಕಾನೂನಿನ ಮೇಲೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳು ಪ್ರಭಾವವನ್ನು ಬೀರುವುದನ್ನು ಹೇಗೆ ಒಪ್ಪಿಕೊಂಡಿದ್ದವು, ಮತ್ತು ಆಧುನಿಕ ಕಾನೂನುಗಳ ಹಿಂದೆ ಇರುವ ಮೌಲ್ಯ ಮತ್ತು ಪ್ರಭಾವಗಳೇನು ಈ ಎಲ್ಲಾ ಸಂಗತಿಗಳ ಕುರಿತ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ಒದಗಿಸಿದ್ದಾರೆ.
©2024 Book Brahma Private Limited.