ಮಹಾತ್ಮಾ ಗಾಂಧೀ ಮತ್ತು ಜವಾಹರ್ ಲಾಲ್ ನೆಹರೂ ಅವರು ಬರೆದಂತಹ ಪತ್ರಗಳು ಇಂದಿಗೂ ಮಹತ್ವ ಪಡೆದಿವೆ. ಗಾಂಧಿ ಅವರು ಬರೆದ ಪತ್ರಗಳಲ್ಲಿ ಅವರು ತಮ್ಮ ತತ್ವಗಳ ಪರಿಪಾಲನೆ ಹಾಗೂ ಅಹಿಂಸಾ ಮಾರ್ಗದ ಮಹತ್ವದ ಅರಿವನ್ನು ನೀಡಿದ್ದಾರೆ. ಯಾವ ರೀತಿ ಸತ್ಯ ಮತ್ತು ಅಹಿಂಸಾ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜೀವನದ ಉದ್ದೇಶ ಸಫಲವಾಗುವುದು ಎಂಬ ಅರಿವನ್ನು ಗಾಂಧೀಜಿಯವರು ಬರೆದಂತಹ ಪತ್ರಗಳೂ ನೀಡುತ್ತವೆ. ಜವಾಹರ್ ಲಾಲ್ ನೆಹರೂ ಅವರು ತಮ್ಮ ಮಗಳಿಗೆ ಬರೆದ ಪತ್ರಗಳನ್ನು ಪ್ರಾಥಮಿಕ ಮಕ್ಕಳ ಪುಸ್ತಕಗಳಲ್ಲಿ ಪಠ್ಯವಾಗಿತ್ತು. ಜೀವನವನ್ನು ಯಶಸ್ವಿಯಾಗಿ ಯಾವ ರೀತಿ ಮುನ್ನಡೆಸಬೇಕು ಎಂಬುದರ ಕುರಿತು ತಮ್ಮ ಮಗಳಿಗೆ ಬರೆದಂತಹ ಪತ್ರಗಳು ಈ ಪುಸ್ತಕದಲ್ಲಿ ದಾಖಲಿಸಲಾಗಿದೆ.
ಗಾಂಧೀಜಿ ಮತ್ತುನೆಹರೂ ಅವರು ಬರೆದ ಪತ್ರಗಳಲ್ಲಿ ಪ್ರಮುಖವಾಗಿರುವ ಪತ್ರಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಅರ್ಜುನ್ ದೇವ್ ಅವರು ಇಂಗ್ಲಿಷಿನಲ್ಲಿ ಸಂಪಾದಿಸಿದ ಕೃತಿಯನ್ನು ಕನ್ನಡಕ್ಕೆ ಎಂ ಅಬ್ದುಲ್ ರೆಹಮಾನ್ ಪಾಷಾ ಅವರು ಅನುವಾದಿಸಿದ್ದಾರೆ. ದೇಶದ ಅಗ್ರಮಾನ್ಯ ವ್ಯಕ್ತಿಗಳ ಅಪರೂಪದ ಪತ್ರಗಳು ಸೊಗಸಾಗಿ ಅನುವಾದಗೊಂಡಿಗೆ.
©2024 Book Brahma Private Limited.