ಹಿರಿಯ ಲೇಖಕ-ಪತ್ರಕರ್ತ-ಅನುವಾದಕ ಜಿ.ಎನ್. ರಂಗನಾಥ ರಾವ್ ಅವರು ಅನುವಾದಿಸಿರುವ ಕೃತಿ-ಬಾಪೂ ನಂತರದ ಭಾರತ. ಹಿರಿಯ ಲೇಖಕ ರಾಮಚಂದ್ರ ಗುಹ ಅವರು ಇಂಗ್ಲಿಷಿನಲ್ಲಿ ಬರೆದ ಕೃತಿಯ ಕನ್ನಡಾನುವಾದವಾಗಿದೆ. ಗತಕಾಲದಲ್ಲಿಓದುಗರನ್ನು ಮುಳುಗಿಸಿ ವರ್ತಮಾನದಲ್ಲಿ ತೇಲಿಸುವ ಕಥಾನಕವಾಗಿದೆ ಈ ಕೃತಿ. ಬ್ರಿಟಿಷ್ ಸೇನೆ ಮತ್ತು ಸಿವಿಲ್ ಸೇವೆಗಳು, ತನ್ನ ಭೂಪ್ರದೇಶದ, ತೆರಿಗೆ ನೀತಿಗಳು ಹಾಗೂ ದೇಶಿಯ ಸಂಸ್ಥಾನಗಳ ವಿಚಿತ್ರ-ವಿಲಕ್ಷಣ ಸ್ಥಿತಿ- ಸ್ಥಾನಮಾನಗಳನ್ನು ಸ್ಟ್ರಾಚೆ ನಿರೂಪಿಸಿದ್ದಾನೆ ಎನ್ನುವಂತಹ ಕಥಾನಕ ಇಲ್ಲಿದೆ. ಪಕ್ಷ ರಾಜಕೀಯದ ಕುರಿತ ಚಿಂತನೆಗಳು, ವಿಭಜನೆಯ ತರ್ಕ, ಸ್ವಾತಂತ್ಯ್ರ ಮತ್ತು ಪಿತೃಹತ್ಯೆ ಹೀಗೆ ಅನೇಕ ವಿಚಾರಧಾರೆಗಳ ತುಣುಕುಗಳು ಈ ಕೃತಿಯಲ್ಲಿ ಪ್ರಸ್ತಾಪವಾಗಿವೆ.
©2024 Book Brahma Private Limited.