ವೈಚಾರಿಕವಾಗಿ ಭಿನ್ನ ನಿಲುವುಳ್ಳ ವ್ಯಕ್ತಿಗಳನ್ನು ಸದ್ದಿಲ್ಲದೆ ಇಲ್ಲವಾಗಿಸುವ ಸಂಚೊಂದು ರೂಪುಗೊಳ್ಳುವುದು ಜಗತ್ತಿನಾದ್ಯಂತ ಗೋಚರವಾಗಿದೆ. ನಮ್ಮ ದೇಶದಲ್ಲೂ ಗಾಂಧೀ ಹತ್ಯೆಯ ವಿಶ್ಲೇಷಣೆ ಇದುವರೆಗೂ ಖಂಡನೆಯ ರೂಪದಲ್ಲಿತ್ತು. ಬರುಬರುತ್ತಾ ಅದರ ರೂಪವೇ ಬದಲಾದದ್ದು ವಿಸ್ಮಯ ಮತ್ತು ಆತಂಕಕಾರಿ. ಯಾವುದೋ ಮಹತ್ಕಾರ್ಯ ಸಾಧನೆಗೆ ಆ ಕೆಲಸ ಮಾಡಿದ್ದೆಂದು ಸಮರ್ಥಿಸಿ ಕೊಳ್ಳುವ ಗಾಂಧಿ ಹಂತಕ ನಾಥೂರಾಮ ಗೋಡ್ಸೆ ಹಾಗೂ ಸಹಚರರನ್ನು ಇಂದು ಹುತಾತ್ಮರೆಂದು ಬಣ್ಣಿಸುವ, ಅವರನ್ನು ಅಮರರನ್ನಾಗಿಸಲು ಸ್ಮಾರಕ ಕಟ್ಟುವ ಹಿಂಬಾಲಕರು ಕಾಣಿಸುತ್ತಿದ್ದಾರೆ. ಗಾಂಧೀಜಿಯನ್ನು ಕೊಂದಿದ್ದೇಕೆಂದು ಸ್ಪಷ್ಟವಾಗಿ ನಿರ್ಭಯವಾಗಿ ಹೇಳುವ ಗೋಡ್ಸೆ ಮುಂದೊಂದು ದಿನ ಹೀರೋ ಆಗುವ ಅಪಾಯವನ್ನು ಈ ಕೃತಿ ಮುಂದಿಡುತ್ತದೆ...
©2024 Book Brahma Private Limited.