ಲೇಖಕ ಡಾ. ಶಂ. ಬಾ. ಜೋಶಿ ಅವರ ಇತಿಹಾಸಕ್ಕೆ ಸಂಬಂಧಪಟ್ಟ ಕೃತಿ ʻಮಹಾರಾಷ್ಟ್ರದ ಮೂಲ, ಅರ್ಥಾತ್ ಮೂಲ ಮಹಾರಾಷ್ಟ್ರʼ. ಪುಸ್ತಕದ ಶೀರ್ಷಿಕೆಯೇ ಹೇಳುವಂತೆ ಇದು ಮಹಾರಾಷ್ಟ್ರದ ಇತಿಹಾಸದ ಬಗ್ಗೆ ಹೇಳುವ ಕೃತಿಯಾಗಿದೆ. ಆಧುನಿಕ ಮರಾಠಿ ಭಾಷೆಯು ಮಹಾರಾಷ್ಟ್ರ ಪ್ರಾಕೃತದಿಂದ ಅಭಿವೃದ್ಧಿಗೊಂಡದ್ದಾಗಿದೆ. ಸುಮಾರು 4 ಶತಮಾನಗ ಹಿಂದಿನ ಸುದೀರ್ಘ ಇತಿಹಾಸವನ್ನು ಹೊಂದಿರುವ ಮಹಾರಾಷ್ಟ್ರವು ಮೊದಲ ಸಹಸ್ರಮಾನದಲ್ಲಿ ಹಲವಾರು ಸಾಮ್ರಾಜ್ಯಗಳ ಭಾಗವಾಗಿತ್ತು. ಇವುಗಳಲ್ಲಿ ಮೌರ್ಯ ಸಾಮ್ರಾಜ್ಯ, ಸಾತವಾಹನ ರಾಜವಂಶ, ವಕಾಟ ಸಾಮ್ರಾಜ್ಯ, ಚಾಲುಕ್ಯ ರಾಜವಂಶ ಮತ್ತು ರಾಷ್ಟ್ರಕೂಟ ರಾಜವಂಶಗಳೂ ಸೇರಿವೆ. ಹೀಗೆ ಮಹಾರಾಷ್ಟ್ರ ನೆಲದ ಮೂಲದ ಬಗ್ಗೆ ಈ ಪುಸ್ತಕವು ಹೇಳುತ್ತದೆ.
©2024 Book Brahma Private Limited.